Top Newsರಾಜಕೀಯರಾಜ್ಯ

ಧರ್ಮಸ್ಥಳ ಕೇಸ್​; ಸರ್ಕಾರದ ನಡವಳಿಕೆಗೆ ಮಂಜುನಾಥ ಸ್ವಾಮಿಯೇ ಶಿಕ್ಷೆ ನೀಡುತ್ತಾನೆ; ಹೆಚ್​ಡಿಕೆ

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡವಳಿಕೆಗೆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡುತ್ತಾನೆ ಎಂದು ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ನಡೆದುಕೊಂಡ ರೀತಿಗೆ ನಿಜಕ್ಕೂ ಶಿಕ್ಷೆಯಾಗಬೇಕು. ಮುಂದಿನ ದಿನಗಳಲ್ಲಿ ಈ ಸರ್ಕಾರಕ್ಕೆ ಧರ್ಮಸ್ಥಳ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡುತ್ತಾನೆ ಎಂಬ ನಂಬಿಕೆ ಇದೆ. ಪ್ರಾರಂಭಿಕ ಹಂತದಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ. ನಾನು ಧರ್ಮವನ್ನು ಬೆರೆಸಲು ಹೋಗಲ್ಲ. ಆದರೆ ಸರ್ಕಾರ ನಡೆದುಕೊಂಡ ರೀತಿ ಕ್ಷೇತ್ರಕ್ಕೆ ಅವಮಾನ, ಅನುಮಾನ ಆಗೋ ರೀತಿಯಲ್ಲಿ ಸರ್ಕಾರ ಎಸ್​ಐಟಿ ತನಿಖೆ ನಾಟಕ ಮಾಡಿದೆ ಎಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣವನ್ನು ಮೊದಲ ಹಂತದಲ್ಲಿ  ಸರ್ಕಾರಕ್ಕೆ ದೂರು ಕೊಟ್ಟಿದ್ದು  ದ್ವಾರಕನಾಥ್​. ಸಿಎಂಗೆ ಅವರೇ ದೂರು ಕೊಟ್ಟರು.ಆಗ ಸಿಎಂ ದೂರು ಬಂದ ತಕ್ಷಣ ಕ್ರಮ ತೆಗೆದುಕೊಳ್ಳುವ ವಾತಾವರಣ ನಿರ್ಮಾಣ ಮಾಡಿದ್ರು ಎಂದು ಗುಡುಗಿದ್ದಾರೆ.

Comments (0)

Your email address will not be published. Required fields are marked *

Back to top button