KSRTC ಬಸ್ ಬಂದ್ನಿಂದ ಜನರಿಗೆ ತೊಂದರೆಯಾದ್ರೆ ಸರ್ಕಾರವೇ ಹೊಣೆ – ಆರ್.ಎಫ್ ಕೌಳಿಕಾಯಿ

ಹುಬ್ಬಳ್ಳಿ: ಕೆಎಸ್ಆರ್ಟಿಸಿ ನೌಕರರ ವೇತನ ಪರಿಷ್ಕರಣೆ, ಪ್ರಮುಖ ಬೇಡಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 5 ರಂದು ಅನಿರ್ದಿಷ್ಟಾವಧಿ ಬಂದ್ಗೆ ಕರೆ ನೀಡಲಾಗಿದ್ದು, ನಮ್ಮ ಬಂದ್ ಕರೆಯಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಸರ್ಕಾರವೇ ನೇರಹೊಣೆ ಎಂದು ಕೆಎಸ್ಆರ್ಟಿಸಿ ನೌಕರರ ಸಂಘದ ಜಂಟಿ ಕ್ರಿಯಾ ಸಮಿತಿ ಸದಸ್ಯ ಆರ್.ಎಫ್ ಕೌಳಿಕಾಯಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಎಸ್ಆರ್ಟಿಸಿ ನೌಕರರ ಸಂಘದ ವೇತನ ಪರಿಷ್ಕರಣೆ ಪ್ರತಿ ನಾಲ್ಕು ವರ್ಷಕೊಮ್ಮೆ ಮಾಡಬೇಕು. ಈ ಹಿಂದೆ 2020ರಲ್ಲಿ ಮಾಡಬೇಕಿದ್ದ ವೇತನ ಪರಿಷ್ಕರಣೆಯನ್ನು 2023ರಲ್ಲಿ ಜಾರಿ ಮಾಡಲಾಗಿದೆ. ಇಲ್ಲಿ ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು, ಈಗ 2027ರಲ್ಲಿ ವೇತನ ಪರಿಷ್ಕರಣೆ ಅಂತಿದೆ, ಇದು ಸರಿಯಲ್ಲ.
ಈಗಾಗಲೇ ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಬಗ್ಗೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರ ಗಮನಕ್ಕೂ ತರಲಾಗಿದೆ. ಹಲವಾರು ಬಾರಿ ಇದರ ಬಗ್ಗೆ ಚರ್ಚೆಗಳನ್ನು ನಡೆಸಲಾಗಿ ಸಮಯವನ್ನು ಸರ್ಕಾರಕ್ಕೆ ನೀಡುತ್ತಾ ಬರಲಾಗಿದೆ. ಆದರೆ ಸರ್ಕಾರ ನಮ್ಮ ನ್ಯಾಯಯುತವಾದ ಬೇಡಿಕೆಗಳಿಗೆ ಸ್ಪಂದನೆ ಮಾಡದಿದ್ದ ಕಾರಣ ಅನಿವಾರ್ಯವಾಗಿ ನಾವು ಮುಷ್ಕರಕ್ಕೆ ಮುಂದಾಗಬೇಕಾಗಿದೆ.
ಈಗಲೂ ಸರ್ಕಾರಕ್ಕೆ ಸಮಯ ನೀಡಲಾಗಿದ್ದು ಆಗಸ್ಟ್ 4ರ ಒಳಗಾಗಿ ಕರೆದು ಸಿಎಂ ಅವರು ಮಾತಾಡಿ ಬೇಡಿಕೆಗಳಿಗೆ ಸ್ಪಂದನೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ನಿಲ್ಲದು. ಅಗಸ್ಟ್ 5 ರ ಅನಿರ್ದಿಷ್ಟಾವಧಿ ಮುಷ್ಕರದಿಂದ ಜನರಿಗೆ ಆಗುವ ತೊಂದರೆಗೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಕಿಡಿಕಾರಿದ್ರು.




