ರಾಜ್ಯಸುದ್ದಿ

ಕನ್ನಡ ನಾಮಫಲಕ್ಕೆ ಬೆಂಕಿ ಇಟ್ಟ ಪುಂಡರು

ಬೆಳಗಾವಿ : ಬೆಳಗಾವಿಯಲ್ಲಿ ಕನ್ನಡ ಬೋರ್ಡ್‌ಗಳ ಕಡ್ಡಾಯ ಹಿನ್ನೆಲೆ ಗಡಿಯಲ್ಲಿ ಮತ್ತೆ ಖ್ಯಾತೆ ತೆಗೆದ ಶಿವಸೇನೆಯ ಪುಂಡರು ಕನ್ನಡ ನಾಮಫಲಕಕ್ಕೆ ಬೆಂಕಿ ಇಡುವುದರ ಮೂಲಕ ಗಡಿಯಲ್ಲಿ ಕ್ಯಾತೆ ತೆಗೆದಿದ್ದಾರೆ.


ಬೆಳಗಾವಿ ನಗರದಲ್ಲಿ ಕಡ್ಡಾಯ ಶೇ60 ರಷ್ಟು ಕನ್ನಡ ಬೋರ್ಡ್ ಅಳವಡಿಸುವಂತೆ ಪಾಲಿಕೆ ಆದೇಶ ಹೊರಡಿಸಿದಕ್ಕೆ ಪಾಲಿಕೆ ಹಾಗೂ ಸರ್ಕಾರದ ಆದೇಶದ ವಿರುದ್ದ ಗಡಿಯಲ್ಲಿ ಪುಂಡರು ಕನ್ನಡ ಬೋರ್ಡ್​ಗಳಿಗೆ ಬೆಂಕಿ ಹಚ್ಚಿದ್ದಾರೆ.

ಕನ್ನೇರಿ ಮಠದಲ್ಲಿ ಹಾಕಿದ್ದ ಕನ್ನಡ ಬೋರ್ಡ್ ಗಳನ್ನ ಶಿವಸೇನೆ ಹಾಗೂ ಎಮ್.ಈ.ಎಸ್ ಕಾರ್ಯಕರ್ತರು ಹರಿದು ಬೆಂಕಿ ಹಚ್ಚಿ ಪುಂಡಾಟ ಮೆರೆದಿದ್ದಾರೆ.

Comments (0)

Your email address will not be published. Required fields are marked *

Back to top button