Top Newsಜಿಲ್ಲೆರಾಜಕೀಯರಾಜ್ಯಸುದ್ದಿ

ನಿನ್ನೆ ನಮ್ಮ ದೋಸ್ತ ಕರೆ ಮಾಡಿದ್ದ..ನಾಡಿದ್ದು ಹೋಗಿ ಭೇಟಿ ಆಗ್ತೀನಿ- ಬಿಆರ್ ಪಾಟೀಲ್ ಕುತೂಹಲ

ಕಲಬುರಗಿ : ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತಾ ಅಸಮಾಧಾನಗೊಂಡಿರುವ ಹಿರಿಯ ಶಾಸಕ ಬಿ.ಆರ್. ಪಾಟೀಲ್ ರಾಜ್ಯ ಸರ್ಕಾರದ ವಿರುದ್ಧ ದಿನಕ್ಕೊಂದು ಆರೋಪ ಮಾಡ್ತಿದ್ದಾರೆ.

ಶಾಸಕ ರಾಜು ಕಾಗೆ ರಾಜೀನಾಮೆ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ರಾಜು ಕಾಗೆ ಅವರು ಆರು ತಿಂಗಳ ಹಿಂದೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ ಎಂದಿದ್ದಾರೆ. ಬಿ.ಆರ್. ಪಾಟೀಲ್ ಅವರು ಹೇಳಿದ್ದು ಸತ್ಯ ಇದೆ ಎಂಬ ಕಾಗೆ ಹೇಳಿಕೆ ಹೇಳಿಕೆ ಉಲ್ಲೇಖಿಸಿದ ಬಿ.ಆರ್. ಪಾಟೀಲ್, ಇನ್ನೂ ಬಾಳ ಮಂದಿ ಹೇಳುವವರಿದ್ದಾರೆ.. ಸ್ವಲ್ಪ ತಡಿರಿ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಸಿಎಂ ಬುಲಾವ್ ವಿಚಾರವಾಗಿ ಪ್ರತಿಕ್ರಿಯಿಸಿದ ಆಳಂದ ಶಾಸಕರು, ನಿನ್ನೆ ನಮ್ಮ ದೋಸ್ತ ಕರೆ ಮಾಡಿದ್ದ..ನಾಡಿದ್ದು ಹೋಗಿ ಬೇಟಿ ಆಗ್ತೀನಿ ಎಂದಿದ್ದಾರೆ. ಪೋನಲ್ಲಿ ಸಿಎಂ ಪ್ರೀತಿಯಿಂದ ಮಾತಾಡಿದ್ದಾನೆ.. ನಾನು ಪ್ರೀತಿಯಿಂದ ಮಾತಾಡಿದ್ದೆನೆ.. ರಾಯಚೂರಿಗೆ ಬರ್ತಿಯಾ ಅಂದ.. ನೀವು ಕರೆದಿಲ್ಲ ..ನಾನು ಬರಲ್ಲ ಅಂದಿನಿ ಎಂದು ಬಿ.ಆರ್ ಪಾಟೀಲ್ ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button