ರಾಜಕೀಯರಾಜ್ಯ

ತಿ.. ಮುಚ್ಕೊಂಡ್ ಬಾರಯ್ಯ..! ಮಂತ್ರಿಗೆ ಸಿಎಂ ಆವಾಜ್

ಸಿಎಂ ಸಿದ್ದರಾಮಯ್ಯನವರು ವೇದಿಕೆಗಳ ಮೇಲೆಯೇ ಐಎಎಸ್, ಐಪಿಎಸ್ ಅಧಿಕಾರಿಗಳನ್ನ ಗದರಿರುವುದನ್ನು, ಏಕವಚನದಲ್ಲಿ ನಿಂದಿಸಿರುವುದನ್ನು ನೀವು ಗಮನಿಸಿರ್ತೀರಿ. ಈಗ ಸಿಎಂ ಸಿದ್ದರಾಮಯ್ಯನವರು ತಮ್ಮ ಸಂಪುಟದ ಸಚಿವರೊಬ್ಬರನ್ನೇ ಏಕವಚನದಲ್ಲಿ ನಿಂದಿಸಿ ಕೆಟ್ಟಮಾತುಗಳಲ್ಲಿ ಬೈದು ಆವಾಜ್ ಹಾಕಿದ್ದಾರೆ ಎನ್ನುವುದು ಸಿಎಂ ಆಪ್ತವಲಯಗಳ ಮೂಲಗಳಿಂದ ತಿಳಿದುಬಂದಿದೆ.

ಸಿಎಂ ಸಿದ್ದರಾಮಯ್ಯನವರು ತಮ್ಮ ಸಚಿವ ಸಂಪುಟ ಪುನಾರಚನೆಗೆ ಮುಂದಾಗಿದ್ದಾರೆ. ಇದೇ ವೇಳೆ ತಮ್ಮ ಸರ್ಕಾರದ ಸಚಿವರೊಬ್ಬರನ್ನ ತಿ.. ಮುಚ್ಕಂಡ್ ಬಾರಯ್ಯ ಇಲ್ಲಿ ಅಂತ ಕರೆದಿದ್ದಾರೆ.

ಸಂಪುಟ ಪುನಾರಚನೆ ಬಗ್ಗೆ ಚರ್ಚಿಸುವ ಸಲುವಾಗಿ ಆ ಪ್ರಭಾವಿ ಮಂತ್ರಿಯೊಬ್ಬರಿಗೆ ಕರೆ ಮಾಡಿ ತಮ್ಮ ಕಚೇರಿಗೆ ಬರಲು ಸೂಚಿಸಿದ್ದರು. ಆದ್ರೆ ಆ ಪ್ರಭಾವಿ ಮಂತ್ರಿ, ತಮ್ಮ ಸೀಟು ಉಳಿಸಿಕೊಳ್ಳುವ ಸಲುವಾಗಿ ತಮ್ಮ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆಗೆ ಸಿಎಂ ಕಾಲ್ ಬಂದಿದ್ದರಿಂದ ದೌಡಾಯಿಸಿ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸಂಜೆ ಆಗಿತ್ತು. ಸಂಜೆ ಆಯ್ತಲ್ಲ ಅಂತ ಆ ಮಿನಿಸ್ಟರ್ ಮನೆಗೆ ಹೋಗಲೇ ಇಲ್ಲ.

ಆದ್ರೆ ಬೆಳಿಗ್ಗೆಯೂ ಸಿಎಂ ಕಚೇರಿಗೆ ಹೋಗಲು ಆ ಮಿನಿಸ್ಟರ್ ಹೆದರಿದ್ದರು. ಎಲ್ಲಿ ಸಿಎಂ ಸಾಹೇಬ್ರು ಬೈತಾರೋ ಅಂತ ಹೆದರಿ ಮನೆಯಲ್ಲೇ ಇದ್ರು. ಫೋನ್ ಮಾಡಿ ಹೇಳಿದ್ರೂ ಕೂಡ ಆ ಮಿನಿಸ್ಟರ್ ಬಂದಿಲ್ಲ ಅಂತ ಸಿಟ್ಟಾದ ಸಿದ್ದರಾಮಯ್ಯ ಮತ್ತೊಮ್ಮೆ ಫೋನ್ಮಾಡಿ ಕ್ಲಾಸ್ ತಗೊಂಡಿದ್ದಾರೆ.. ತಿ.. ಮುಚ್ಕಂಡ್ ಬೇಗ ಬಾರಯ್ಯ ಅಂತಲೇ ಗದರಿದ್ದಾರೆ.

ಸಿಎಂ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಳ್ತಿದ್ದಂತೆ ಹೆದರಿ ಆ ಮಂತ್ರಿ ದೌಡಾಯಿಸಿ ಸಿಎಂ ಕಚೇರಿಗೆ ಹೋಗಿದ್ರಂತೆ. ಅಲ್ಲೂ ಕೂಡ ಸಿಎಂ ಹಿಗ್ಗಾಮುಗ್ಗಾ ಉಗಿದುಹಾಕಿದ್ದಾರೆ. ಸಿಎಂ ಬೈತಿದ್ರೂ ತಲೆ ಗಡ್ಡ ಕೆರೆದುಕೊಂಡು ಅಲ್ಲಿ ಕೂತಿದ್ದರು ಎನ್ನುವ ಮಾಹಿತಿ ಸಿಎಂ ಕಚೇರಿಯ ಆಪ್ತ ವಯಲದಿಂದ ತೂರಿ ಬಂದಿದೆ.

ಉಗಿಸಿಕೊಂಡ ಮಂತ್ರಿ ಮೇಲೆ ಸಾಲು ಸಾಲು ಕಂಪ್ಲೇಂಟ್

ಇನ್ನು ಉತ್ತರ ಕರ್ನಾಟಕ ಭಾಗದ ಆ ಮಂತ್ರಿ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಅವರ ವಿರುದ್ಧ ಸಾಲು ಸಾಲು ದೂರುಗಳು ಕೇಳಿಬಂದಿದೆ. ಲಿಂಗಾಯತ ಸಮುದಾಯದ ಶಾಸಕರುಗಳು, ಇತರೆ ನಾಯಕರುಗಳು ಕೂಡ ಆ ಸಚಿವರ ವಿರುದ್ಧ ಸಾಲು ಸಾಲು ದೂರು ನೀಡಿದ್ದಾರೆ. ಈಗ ಸಿಎಂ ಕೂಡ ಉಗಿದುಹಾಕಿದ್ದು, ಆ ಪ್ರಭಾವಿ ಮಂತ್ರಿಯ ಕುರ್ಚಿ ಬಿದ್ದುಹೋಗೋದು ಪಕ್ಕಾ ಎನ್ನಲಾಗ್ತಿದೆ.

Comments (0)

Your email address will not be published. Required fields are marked *

Back to top button