ರಾಜ್ಯ

ಅಪ್ಪನನ್ನೇ ಮುಗಿಸಲು ಸುಪಾರಿ ಕೊಟ್ಟ ಚೈತ್ರಾ ಕುಂದಾಪುರ..!

ಹೆತ್ತ ತಂದೆಯನ್ನೆ ಕೊಲ್ಲಲು ಸುಪಾರಿ ಕೊಟ್ಟ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ.ಚೈತ್ರಾ ವಿರುದ್ಧ ತಂದೆ ಬಾಲಕೃಷ್ಣ ನಾಯ್ಕ್ ಅವರೇ ಪೊಲೀಸ್ ಠಾಣೆ ಮೆಟ್ಟಿಲೇರಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ನನ್ನನ್ನು ಹಾಗೂ ನನ್ನ ಇನ್ನೊಬ್ಬ ಮಗಳನ್ನು ಮುಗಿಸುವ ಬೆದರಿಕೆ ಹಾಕಿದ್ದಾಳೆ.ಕುಂದಾಪುರದಲ್ಲಿರುವ ನನ್ನ ಆಸ್ತಿಯನ್ನು ಕಬಳಿಸಲು, ನನ್ನನ್ನು ಮುಗಿಸಬಹುದು ಎಂಬ ಭಯವಿದೆ ಎಂದ ಬಾಲಕೃಷ್ಣ ನಾಯ್ಕ್. ಭೂಗತ ಡಾನ್​​ಗಳಿಗೆ ಸುಪಾರಿ ಕೊಟ್ಟು ಮುಗಿಸುವ ಬೆದರಿಕೆ ಹಾಕಿದ್ದಾಳೆ ಎಂದು ಚೈತ್ರಾ ವಿರುದ್ದ ದೂರಿದ್ದಾರೆ.

ಶ್ರೀಕಾಂತ್​ನನ್ನು ಮದುವೆ ಆಗುವುದು ಸರಿಯಲ್ಲ ಅವನು ಒಳ್ಳೆವನಲ್ಲ ಎಂದು ಹೇಳಿದರೂ ಅವನನ್ನೆ ಮದುವೆಯಾಗಿದ್ದಾಳೆ.ಶ್ರೀಕಾಂತ್​ನನ್ನು ಮದ್ವೆ ಆಗೋದು ಬೇಡ ಎನ್ನುವುದಾದ್ರೆ, 5 ಲಕ್ಷ ರೂಪಾಯಿ ಕೊಡುವಂತೆ ಚೈತ್ರಾ ಕೇಳಿದ್ದಳು.ನಾನು ಮದುವೆಗೆ ಒಪ್ಪದೇ ಇದ್ದಲ್ಲಿ ಕೊಲೆ ಮಾಡುವ ಬೆದರಿಕೆಯೂ ಹಾಕಿದ್ದಳು ಹೀಗಂತ ಚೈತ್ರಾ ಕುಂದಾಪೂರ ತಂದೆ ಬಾಲಕೃಷ್ಣ ದೂರು ನೀಡಿದ್ದಾರೆ.

 

Comments (0)

Your email address will not be published. Required fields are marked *

Back to top button