Wednesday, January 28, 2026
23.8 C
Bengaluru
Google search engine
LIVE
ಮನೆಜಿಲ್ಲೆನಾವು ಒಂದು ಬಾಂಬ್​ ಹಾಕಿದರೆ ಪಾಕಿಸ್ತಾನ‌ವನ್ನು ಭೂಪಟದಲ್ಲಿ ಹುಡುಕಬೇಕಾಗುತ್ತೆ : ಯತ್ನಾಳ್​

ನಾವು ಒಂದು ಬಾಂಬ್​ ಹಾಕಿದರೆ ಪಾಕಿಸ್ತಾನ‌ವನ್ನು ಭೂಪಟದಲ್ಲಿ ಹುಡುಕಬೇಕಾಗುತ್ತೆ : ಯತ್ನಾಳ್​

ಪಾಕಿಸ್ತಾನಿಯರ ಅಣುಬಾಂಬ್ ದಾಳಿ ಬೆದರಿಕೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಪಾಕಿಸ್ತಾನ ಸಚಿವರು ಅಣು ಬಾಂಬ್ ಬೆದರಿಕೆ ಹಾಕಿದ್ದಾರೆ. ನಾವು ಒಂದು ಅಣು ಬಾಂಬ್ ಪ್ರಯೋಗಿಸಿದರೆ ಪಾಕಿಸ್ತಾನ‌ವನ್ನು ಭೂಪಟದಲ್ಲಿ ಹುಡುಕಬೇಕಾಗುತ್ತೆ ಹುಬ್ಬಳ್ಳಿಯಲ್ಲಿ ಯತ್ನಾಳ್​ ಹೇಳಿಕೆ ನೀಡಿದ್ದಾರೆ.

ಕಾಹ್ ಹೈ ದೋಖೋ ರೇ ಬಾಬಾ ಪಾಕಿಸ್ತಾನ‌‌ ಅಂತಾ ಪಾಕಿಸ್ತಾನಿಗಳು ತಮ್ಮ ದೇಶ ಹುಡುಕಬೇಕಾಗುತ್ತೆ. ಜಗತ್ತು ಭಾರತವನ್ನು ಹಗುರವಾಗಿ ತೆಗೆದುಕೊಳ್ಳಬಾರದು. ರಷ್ಯಾ, ಅಮೇರಿಕಾ ಸೇರಿ ಬಹುತೇಕ ಜಗತ್ತಿನ ದೇಶಗಳು ನಮ್ಮ ಬೆನ್ನಿಗೆ ಇವೆ. ಭಾರತ ದೇಶವನ್ನು ಎಲ್ಲಾ ದೇಶಗಳು‌ ಪ್ರೀತಿಯಿಂದ ಕಾಣುತ್ತವೆ. ಭಾರತದೊಂದಿಗೆ ಪಾಕಿಸ್ತಾನ ಕಿರಿಕ್ ಮಾಡುತ್ತಲೇ ಇದ್ದರೆ ಇಸ್ರೇಲ್ ಒಂದೆರೆಡು ಬಾಂಬ್ ಹಾಕಿ ಹೋಗುತ್ತದೆ. ನಮ್ಮ ಗೆಳೆತನ ಈಗ ಬಹಳ‌ ವಿಸ್ತಾರವಾಗಿದೆ. ನರೀ ಬುದ್ಧಿಯ ಚೀನಾ ದೇಶದ ವ್ಯಾಪಾರ ನಡೆಯುವುದೂ ನಮ್ಮಿಂದ. ಇಂದಿನ‌ ಭಾರತಕ್ಕೆ ಜಗತ್ತು ಭಯ ಪಡುತ್ತಿದೆ. ಇಂದೂ ಜಗತ್ತಿನ‌ ಹಲವು ದೇಶಗಳಲ್ಲಿ‌ ಭಾರತದ ಪ್ರಜೆಗಳು ಉನ್ನತ ಚುಕ್ಕಾಣಿ ಹಿಡಿದಿದ್ದಾರೆ. ಶಿಕ್ಷಣ, ಅವಿಷ್ಕಾರ ಸೇರಿ ಎಲ್ಲದರಲ್ಲೂ ನಮ್ಮವರು ಸಾಧನೆ ದೊಡ್ಡದಾಗೆ ಬೆಳೆದಿದೆ.

ಹಿಂದೂಗಳು ಜಾಗೃತಿಯಿಂದ ಇರಬೇಕು. ಒಂದು ವೇಳೆ ಬಾರ್ಡರ್​​​ನಲ್ಲಿ ಯುದ್ಧ ಆರಂಭವಾದ್ರೆ, ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳಬೇಕು. ಸೈನಿಕರು ಬಾರ್ಡ್​​​​ನಲ್ಲಿ ಯುದ್ಧ ಮಾಡುತ್ತಾರೆ. ಪೊಲೀಸರು ಎಲ್ಲಾ ಕಡೆ ಬರಲು‌ ಸಾಧ್ಯವಾಗುವುದಿಲ್ಲ. ಪೊಲೀಸರು ಬರುವವರೆಗಾದ್ರೂ ನಾವು ನಮ್ಮ ರಕ್ಷಣೆ ಮಾಡಿಕೊಳ್ಳವ ಮಟ್ಟಿಗೆ ಸಜ್ಜಾಗಿರಬೇಕು. ದೇಶದ ಒಳಗಿನ ಕೆಲವು ದೇಶದ್ರೋಹಿಗಳು ಯುದ್ಧದ ಸಂದರ್ಭ‌ ಬಳಸಿಕೊಂಡು ಹಿಂದೂಗಳನ್ನು ಟಾರ್ಗೆಟ್ ಮಾಡಬಹುದು. ಎಚ್ಚರಿಕೆಯಿಂದ ಹಿಂದೂಗಳು ಇರಬೇಕು ಅಂತಾ ಶಾಸಕ ಯತ್ನಾಳ್ ಕರೆ ನೀಡಿದ್ರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments