ಜಿಲ್ಲೆ

 ರಾಜ್ಯದಲ್ಲಿ ಈ ಭ್ರಷ್ಟ ಅಧಿಕಾರಿಗಳನ್ನ  ಸೇಫ್ ಮಾಡುತ್ತಿರೋದ್ಯಾರು.?

ಬೆಂಗಳೂರು : ಟೌನ್ ಅಂಡ್ ಪ್ಲಾನಿಂಗ್ ನಿರ್ದೇಶಕ  ತಿಪ್ಪೇಸ್ವಾಮಿ ಮೇಲೆ ಲೋಕಾಯುಕ್ತ  ದಾಳಿ ಮಾಡಿ 6 ತಿಂಗಳಾದ್ರೂ  ಶಿಕ್ಷೆ ಆಗಿಲ್ಲ. ತಿಪ್ಪೇಸ್ವಾಮಿಗೆ  ಶಿಕ್ಷೆ ಇರಲಿ ಇಲ್ಲಿಯವರೆಗೆ ವರ್ಗಾವಣೆ ಕೂಡ ಆಗಿಲ್ಲ. ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳನ್ನ ಸೇಫ್ ಮಾಡುತ್ತಿರೋದ್ಯಾರು.? ಲೋಕಾಯುಕ್ತ ದಾಳಿಗೊಳಗಾದವರಿಗೆ ಶಿಕ್ಷೆ ಆಗುತ್ತಿಲ್ಲ ಏಕೆ..?

ಹಾಗಾದ್ರೆ ಭ್ರಷ್ಟರನ್ನ ರಕ್ಷಣೆ ಮಾಡುತ್ತಿದೆಯಾ ರಾಜ್ಯ  ಸರ್ಕಾರ..? ತನಿಖಾ ದಳ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಆಗೋಯ್ತಾ? ದೊಡ್ಡ ಅಧಿಕಾರಿಗಳು ಶಾಮೀಲಾಗಿರೋದ್ರಿಂದ ತನಿಖೆ ದಾರಿ ತಪ್ಪಿತಾ..? ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ ಮಾಡಿದ್ದ ಲೋಕಾಯುಕ್ತ ಟೀಂ ಲೋಕಾಯುಕ್ತ ದಾಳಿ ವೇಳೆ ಗೋಲ್ಡ್ ಖಜಾನೆಯೇ ಪತ್ತೆಯಾಗಿತ್ತು.ಆದ್ರೆ ಇಲ್ಲಿವರಿಗೂ ಭ್ರಷ್ಟ ತಿಪ್ಪೇಸ್ವಾಮಿ  ಮೇಲೆ ಕಟ್ಟುನಿಟ್ಟಿನ ಕ್ರಮವಿಲ್ಲ. MS ಬಿಲ್ಡಿಂಗ್ನಲ್ಲಿ ಖುರ್ಚಿ ಕೊಟ್ಟು ಭ್ರಷ್ಟಾಚಾರ ಮಾಡಲು ಬಿಟ್ಟ ಸರ್ಕಾರ.

Comments (0)

Your email address will not be published. Required fields are marked *

Back to top button