ಜಿಲ್ಲೆರಾಜಕೀಯರಾಜ್ಯ

ವಿವಾದಿತ ಸ್ಥಳದಲ್ಲಿ ರಾತ್ರೋರಾತ್ರಿ ತಲೆ ಎತ್ತಿದ ಕೆಂಪೇಗೌಡ ಪುತ್ತಳಿ

ಕೋಲಾರ : ವಿವಾದಿತ ಸ್ಥಳದಲ್ಲಿ ರಾತ್ರೋರಾತ್ರಿ ತಲೆ ಎತ್ತಿದ ಕೆಂಪೇಗೌಡ ಪುತ್ತಳಿ , ಪುತ್ತಳಿ ನಿರ್ಮಾಣದಲ್ಲಿ ಸಂಸದ ಎಸ್ ಮುನಿಸ್ವಾಮಿ ಕೈವಾಡ ವಿದೆ ಎಂದು ಆರೋಪಿಸಿ ವಿವಿಧ ಸಮುದಾಯ ಮುಖಂಡರು ತಮ್ಮ ಸಮುದಾಯದ ಮಹಾನ್ ನಾಯಕರ ಪುತ್ತಳಿ ನಿರ್ಮಾಣಕ್ಕೆ ಪಟ್ಟು ಹಿಡಿದು ಸಂಸದರ ವಿರುದ್ದ ಶ್ರೀನಿವಾಸಪುರದ ರೋಜಾರಹಳ್ಳಿ ಬಳಿ ದಿಡೀರ್ ಪ್ರತಿಭಟನೆ ನಡೆಸಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ರೋಜಾರಹಳ್ಳಿ ಕ್ರಾಸ್ ಬಳಿ ಕಳೆದ ಕೆಲ ತಿಂಗಳ ಹಿಂದೆ ಕೆಲ ಸಮುದಾಯದ ಮುಖಂಡರು ತಮ್ಮ ಸಮುದಾಯದ ಮಹಾನ್ ನಾಯಕರ ಪುತ್ತಳಿ ನಿರ್ಮಾಣಕ್ಕೆ ಮುಂದಾದಾಗ ಉಳಿದ ಸಮುದಾಯದ ಮುಖಂಡರು ತಮ್ಮ ನಾಯಕರ ಪುತ್ತಳಿ ನಿರ್ಮಾಣಕ್ಕೂ ಜಾಗ ನೀಡಬೇಕು ಎಂದು ಅಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು , ಈ ಸಂದರ್ಭದಲ್ಲಿ ಮದ್ಯ ಪ್ರವೇಶಿಸಿ ರಾಜಿ ಸಂದಾನದ ಮೂಲಕ ಸಂಸದ ಮುನಿಸ್ವಾಮಿ ಎಲ್ಲಾ ಸಮುದಾಯದವರು ಪುತ್ಥಳಿ ಸ್ಥಳಕ್ಕೆ ಪಕ್ಕದ ಕಲ್ಯಾಣಿ ಜಾಗ ಬಳಸಿಕೊಳ್ಳಲು ತಿಳಿಸಿ ಗಲಾಟೆ ಶಮನ ಮಾಡಿದ್ರು , ಆದ್ರೆ ಇತ್ತೀಚೆಗೆ ಕಲ್ಯಾಣಿ ಜಾಗದಲ್ಲಿ ಕಲ್ಯಾಣಿಯ ಮರು ನಿರ್ಮಾಣಕ್ಕೆ ದುರಸ್ಥಿ ಕಾರ್ಯ ನಡೆಯುತ್ತಿದ್ದು ಮತ್ತೊಂದು ಕಡೆ ರಸ್ತೆ ಮದ್ಯ ರೊಜೊರನಹಳ್ಳಿ ಕ್ರಾಸ್ ನ ವೃತ್ತದಲ್ಲಿ ಹೈ ಮಾಸ್ ಲೈಟ್ ನಿರ್ಮಾಣ ಮಾಡುವ ಸ್ಥಳದಲ್ಲಿ ರಾತ್ರೋ ರಾತ್ರಿ ನಾಡ ಪ್ರಭು ಕೆಂಪೇಗೌಡ ಪುತ್ತಳಿ ತಲೆ ಎತ್ತಿದೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿವಿಧ ಸಮುದಾಯದ ಮುಖಂಡರು ಸ್ಥಳಕ್ಕೆ ಧಾವಿಸಿ ಕಲ್ಯಾಣಿ ದುರಸ್ಥಿ ಕಾರ್ಯ ನಿಲ್ಲಿಸಿದ್ದಾರೆ.

ಇನ್ನು ವಿವಿಧ ಸಮುದಾಯದ ಮುಖಂಡರು ನಮ್ಮ ಸಮುದಾಯದ ನಾಯಕರ ಪುತ್ತಳಿಗಳು ಇಡಬೇಕು ಇಲ್ಲ ಕೆಂಪೇಗೌಡ ಪುತ್ತಳಿಯನ್ನು ತೆರವು ಗೊಳಿಸಬೇಕೆಂದು ಒತ್ತಾಯಿಸಿ ಕೆಂಪೇಗೌಡ ಪುತ್ಥಳಿ ಕಲ್ಯಾಣಿ ಸ್ಥಳದಲ್ಲಿ ನಿರ್ಮಾಣ ಮಾಡಲು ಸಂಸದರು ಅನುದಾನ ಬಿಡುಗಡೆ ಮಾಡಿದ್ದಾರೆ, ಕೆಂಪೇಗೌಡ ಪುತ್ಥಳಿ ಸ್ಥಾಪನೆಗೆ ಹಣ ಬಿಡುಗಡೆ ಗೊಳಿಸಿದಂತೆ ಇತರೆ ಹಿಂದುಳಿದ ಸಮೂದಾಯಕ್ಕೆ ಸಹ ಸಂಸದರ ನಿದಿಯಿಂದಲೇ ಹಣ ಬಿಡುಗಡೆ ಮಾಡಲು ಪಟ್ಟು ಹಿಡಿದು ಕೋಲಾರ ಸಂಸದರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಬೇಟಿ ನೀಡಿ ಗುಂಪು ಚದುರಿಸಿದ್ದು ಸ್ಥಳದಲ್ಲಿ ಬಿಗಿ ವಾತಾವರಣ ನಿರ್ಮಾಣವಾಗಿದೆ .

Comments (0)

Your email address will not be published. Required fields are marked *

Back to top button