ಜಿಲ್ಲೆರಾಜಕೀಯರಾಜ್ಯ

ಕರ್ನಾಟಕದ ಕನ್ನಡಿಗರ ಸಾರ್ವಭೌಮತ್ವ ಹಾಗೂ ಗಡಿನಾಡು ಭಾಷಾ ಸಾಮರಸ್ಯಕ್ಕೆ ಕದಡಲು ಕಿಚ್ಚು ಹಚ್ಚಿದ್ದಾರೆ

ಚಿಕ್ಕೋಡಿ : ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಳ್ಕರ್ ಅವರು ತಮ್ಮ ಹೇಳಿಕೆ ಮೂಲಕ ಕರ್ನಾಟಕದ ಕನ್ನಡಿಗರ ಸಾರ್ವಭೌಮತ್ವ ಹಾಗೂ ಗಡಿನಾಡು ಭಾಷಾ ಸಾಮರಸ್ಯಕ್ಕೆ ಕದಡಲು ಕಿಚ್ಚು ಹಚ್ಚಿದ್ದಾರೆ ಕನ್ನಡತಿ ಎಂದು ಹೇಳಿಕೊಳ್ಳುವವರು ಚುನಾವಣೆ ಸಂದರ್ಭದಲ್ಲಿ ಮತಕ್ಕೋಸ್ಕರ ಬೆಂಕಿ ಹಚ್ಚುವ ಸಾಹಸಕ್ಕೆ ಕೈ ಹಾಕಿರುವುದು ರಾಜಕೀಯ ಹುನ್ನರವಲ್ಲದೆ ಬೇರೇನೂ ಅಲ್ಲ ಎಂದು ಕರವೇ ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಖಂಡಿಸಿದೆ.

ಮುಖ್ಯಮಂತ್ರಿಗಳ ತಕ್ಷಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ರು. ಚಿಕ್ಕೋಡಿ ನಗರದಲ್ಲಿ ಇರುವಂತ ಎಲ್ಲಾ ಅಂಗಡಿ ಮುಂಗಟ್ಟ ಮೇಲೆ ಇರುವಂತಹ ಆಂಗ್ಲ ಮರಾಠಿ ಹಿಂದಿ ನಾಮಪಲಕಗಳ ತೆಗೆಯಬೇಕು. ಏಕೆಂದರೆ ಕರ್ನಾಟಕ ರಾಜ್ಯ ಸರ್ಕಾರದ ಆದೇಶ ಇದ್ದಿದ್ದನ್ನು ಸಹ ಅಂಗಡಿ ಮಾಲೀಕರು ತೆಗೆಯಲು ಮುಂದಾಗುತ್ತಿಲ್ಲ. ನಾವು ಸುಮಾರು ಸಲ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರು ಕೂಡ ಪ್ರಯೋಜನವಾಗಲಿಲ್ಲ ಆದ್ದರಿಂದ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಎಲ್ಲಾ ಅಂಗಡಿಗಳ ಮೇಲೆ ಮತ್ತು ವಾಣಿಜ್ಯ ಸಂಘ ಸಂಸ್ಥೆಗಳ ಮೇಲೆ ಕಡ್ಡಾಯವಾಗಿ ಸರ್ಕಾರ ದೇಶದ ಆದೇಶದ ಪ್ರಕಾರ ಶೇಕಡಾ 60% ರಷ್ಟು ಭಾಗ ಕನ್ನಡವಾಗಿರಬೇಕು ನಂತರ ಉಳಿದ ಭಾಷೆ ಇರಬೇಕು ಎಂದು ಸರ್ಕಾರ ಸುಗ್ರೀವಾಜ್ಞೆ ತಂದಿದೆ. ಚಿಕ್ಕೋಡಿ ತಾಲೂಕಿನಲ್ಲಿ ಎಲ್ಲಾ ಅಂಗಡಿ ಮಾಲೀಕರಿಗೆ ನೋಟಿಸು ಮೂಲಕ ಶೇಕಡ 60ರಷ್ಟು ಕನ್ನಡ ನಾಮಪಲಕ ಆಗಬೇಕೆಂದು ಆಗ್ರಹ ಪಡಿಸಿದ್ರು.

Comments (0)

Your email address will not be published. Required fields are marked *

Back to top button