ರಾಜ್ಯ

ದಕ್ಷಿಣ ಕನ್ನಡದಲ್ಲಿ ಮತ್ತೊಮ್ಮೆ ಸೌಜನ್ಯ ಪರ ಹೋರಾಟ

ದಕ್ಷಿಣ ಕನ್ನಡಲ್ಲಿ ಸೌಜನ್ಯ ಅತ್ಯಾಚಾರ ಹಾಗು ಕೊಲೆಯಾಗಿ 13 ವರ್ಷಗಳೇ ಕಳೆದುಹೋಯ್ತು. ಆದರೂ ಈವರೆಗೂ ಅತ್ಯಾಚಾರಿಗಳು ಯಾರು ಅನ್ನೋದು ಮಾತ್ರ ಗೊತ್ತಾಗೇ ಇಲ್ಲ. ಇದರ ನಡುವೆ ಮತ್ತೊಮ್ಮೆ ಬೃಹತ್ ಪ್ರತಿಭಟನೆಗೆ ವೇದಿಕೆ ಸಜ್ಜಾಗುತ್ತಿದೆ. ಹೆಣ್ಣು ಕುಲದ ಸುರಕ್ಷತೆಗಾಗಿ ಬೃಹತ್ ಯಾತ್ರೆ ನಡೆಸಲು ಸೌಜನ್ಯ ಪರ ಹೋರಾಟಗಾರರು ಮುಂದಾಗಿದ್ದಾರೆ..

ಏಪ್ರಿಲ್ 6ರಂದು ಬೆಳಿಗ್ಗೆ 10 ಗಂಟೆಯಿಂದ ಪ್ರತಿಭಟನೆ ನಡೆಯಲಿದೆ.. ಸೌಜನ್ಯ ಶವ ಸಿಕ್ಕ ಸ್ಥಳ ಮಣ್ಣಸಂಕದಿಂದಲೇ ಹೋರಾಟ ನಡೆಯಲಿದೆ.. ಮಣ್ಣಸಂಕದಿಂದ ಬೆಳ್ತಂಗಡಿವರೆಗೂ ಪಾದಯಾತ್ರೆ ನಡೆಯಲಿದೆ. ಬಳಿಕ ಬೆಳ್ತಂಗಡಿಯ ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಯಲಿದೆ.. ‘ಹೆಣ್ಣು ಕುಲದ ಸುರಕ್ಷತೆಗಾಗಿ’ ಘೋಷ ವಾಕ್ಯದೊಂದಿಗೆ ಈ ರ್ಯಾಲಿ ನಡೆಯುತ್ತಿದೆ.. ನ್ಯಾಯದ ಕೂಗಿಗೆ ಧ್ವನಿಗೂಡಿಸಿ ಎಲ್ಲರೂ ಭಾಗವಹಿಸಿ ಅಂತ ಸಂಘಟನೆಗಳು ಮನವಿ ಮಾಡಿದೆ..

 

Comments (0)

Your email address will not be published. Required fields are marked *

Back to top button