ಜಿಲ್ಲೆ

ಈ-ಸ್ವತ್ತಿಗಾಗಿ ಬಡಿದಾಟ; ಪಂಚಾಯ್ತಿ ಮುಂದೆ ಅಜ್ಜಿ ಧರಣಿ

ವಿಜಯನಗರ: ರಾಜ್ಯದಲ್ಲಿ ಸದ್ಯ ಈ ಸ್ವತ್ತು ಕ್ರಾಂತಿ ಜೋರಾಗಿದೆ. ಆದ್ರೆ, ಇಲ್ಲೊಬ್ಬ 80ರ ಅಜ್ಜಿಗೆ 40 ವರ್ಷಗಳಿಂದ ಈ ಸ್ವತ್ತು ಕೊಡದೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕಾಡುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಪಟ್ಟಣದಲ್ಲಿ ಅಜ್ಜಿಯ ಕಷ್ಟ ಕೇಳೋರಿಲ್ಲದಾಗಿದೆ. ಬೇಸತ್ತ ಅಜ್ಜಿ ಏಕಾಂಗಿಯಾಗಿ ಗ್ರಾಮ ಪಂಚಾಯ್ತಿ ಕಚೇರಿ ಎದುರು ಧರಣಿ ಕುಳಿತಿದ್ದಾರೆ…

ಕಳೆದ 40 ವರ್ಷಗಳಿಂದ ಅಲೆಯುತ್ತಿರೋ ಅಜ್ಜಿಯ ನೋವಿಗೆ ಯಾರೂ ಸ್ಪಂದಿಸಿಲ್ಲ.. ಎಲ್ಲಾ ದಾಖಲಾತಿಗಳಿದ್ರೂ ಪಂಚಾಯ್ತಿ ಅಧಿಕಾರಿಗಳು ಮಾತ್ರ ಇಲ್ಲಸಲ್ಲದ  ಸಬೂಬು ಹೇಳ್ತಿದ್ದಾರಂತೆ. ಈ ಸ್ವತ್ತಿಗಾಗಿ ಧರಣಿ ಕುಳಿತಿರೋ 80 ವರ್ಷದ ಅಜ್ಜಿ ಪಾರ್ವತಮ್ಮ ಪುರಾಣಿಕ್ ಮಠ್, ತಮ್ಮ ನಿವೇಶನಕ್ಕೆ ಈ ಸ್ವತ್ತು ಕೊಡುವವರೆಗೂ ಧರಣಿ ಮುಂದುವರಿಸುವುದಾಗಿ ಫ್ರೀಡಂ ಟಿವಿ ಬಳಿ ಅಳಲು ತೋಡಿಕೊಂಡಿದ್ದಾರೆ

Comments (0)

Your email address will not be published. Required fields are marked *

Back to top button