ಕ್ರಿಕೆಟ್

ಸೂರ್ಯಕುಮಾರ್​ಗೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಪಟ್ಟ

ಮುಂಬೈ: ಐಪಿಎಲ್-2025 ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಮುಂಬೈ ಇಂಡಿಯನ್ಸ್ ತಂಡ ತನ್ನ ನೂತನ ನಾಯಕನ ಘೋಷಣೆ ಮಾಡಿದೆ. ಹಾರ್ದಿಕ್ ಪಾಂಡ್ಯ ಬದಲು ಸೂರ್ಯ ಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್​ ಮಾಡಿ ಮುಂಬೈ ಪ್ರಾಂಚೈಸಿ ಘೋಷಣೆ ಮಾಡಿದೆ.

ಸೂರ್ಯ ಮೊದಲ ಪಂದ್ಯಕ್ಕೆ ಮಾತ್ರ ನಾಯಕರಾಗಲಿದ್ದಾರೆ. ಖಾಯಂ ನಾಯಕ ಹಾರ್ದಿಕ್ ಪಾಂಡ್ಯಗೆ ನಿಧಾನಗತಿಯ ಓವರ್ ಕಾರಣಕ್ಕೆ ಒಂದು ಪಂದ್ಯದ ನಿಷೇಧ ಶಿಕ್ಷೆಯಿದೆ. ಈ ಕಾರಣಕ್ಕೆ ಸಿಎಸ್ ಕೆ ವಿರುದ್ಧದ ಮೊದಲ ಪಂದ್ಯಕ್ಕೆ ಸೂರ್ಯಕುಮಾರ್ ನಾಯಕರಾಗಲಿದ್ದಾರೆ.

ಮುಂಬೈ ಇಂತಹದ್ದೊಂದು ಪ್ರಕಟಣೆ ನೀಡುತ್ತಿದ್ದಂತೇ ಕೇವಲ ಒಂದು ಪಂದ್ಯ ಯಾಕೆ, ಇಡೀ ಸೀಸನ್ ಗೇ ಸೂರ್ಯಕುಮಾರ್ ರನ್ನು ನಾಯಕರಾಗಿ ನೇಮಿಸಿ. ಹೇಗಿದ್ದರೂ ಅವರು ಟೀಂ ಇಂಡಿಯಾ ನಾಯಕರಾಗಿ ಯಶಸ್ವಿಯಾಗಿದ್ದಾರೆ. ಮುಂಬೈ ತಂಡಕ್ಕೂ ಅವರೇ ಖಾಯಂ ನಾಯಕರಾಗಲಿ ಎಂದು ಕ್ರಿಕೆಟ್ ಅಭಿಮಾನಿಗಳು ಆಗ್ರಹಿಸಿದ್ದಾರೆ.

Comments (0)

Your email address will not be published. Required fields are marked *

Back to top button