ರಾಜಕೀಯರಾಜ್ಯಸುದ್ದಿ

ನಮ್ಮ ಜನಸಂಖ್ಯೆ ಪ್ರಕಾರ 60 ಸಾವಿರ ಕೋಟಿ ಕೊಡಬೇಕಿತ್ತು; ಸಚಿವ ಜಮೀರ್ ಅಹ್ಮದ್ ಖಾನ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಸಮಪಾಲು, ಸಮಬಾಳು ಎಂಬಂತೆ ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಸಮುದಾಯಕ್ಕೂ ಬಜೆಟ್ ನಲ್ಲಿ ನ್ಯಾಯ ಒದಗಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಕೊಂಡಾಡಿದ್ದಾರೆ. ಆದರೆ ಇದು ಮುಸ್ಲಿಮರನ್ನು ಓಲೈಸೋ ಬಜೆಟ್ ಅಂತ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ನಾಯಕರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ತಿರುಗೇಟು ಕೊಟ್ಟಿದ್ದಾರೆ. ಮುಂದುವರೆದು ಮಾತನಾಡಿದ ಜಮೀರ್ ಅಹ್ಮದ್ ಖಾನ್  ಮುಸ್ಲಿಂಮರ ಜನಸಂಖ್ಯೆಗೆ ಅನುಗುಣವಾಗಿ 60 ಸಾವಿರ ಕೋಟಿ ಕೊಡಬೇಕು ಅಂತ ಹೇಳಿದರು.

ಸಿಎಂ ಬಜೆಟ್ ಮಂಡಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಂ ಜನಸಂಖ್ಯೆ 14% ಇದೆ. ಸಿದ್ದರಾಮಯ್ಯ 4 ಲಕ್ಷ 9 ಸಾವಿರ ಬಜೆಟ್ ಕೊಟ್ಟಿದ್ದಾರೆ. ಜನಸಂಖ್ಯೆ ಪ್ರಕಾರ ಕನಿಷ್ಠ 60 ಸಾವಿರ ಕೋಟಿ ಕೊಡಬೇಕು. 4,700 ಕೋಟಿ ಕೊಟ್ಟಿದ್ದಾರೆ ಅಷ್ಟೇ. ಅಲ್ಪಸಂಖ್ಯಾತರ ಎಜುಕೇಶನ್ ಗಾಗಿ ಕೊಟ್ಟಿದ್ದಾರೆ ಅಂತ ಜಮೀರ್ ಸಮರ್ಥನೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button