Freedom TVಆರೋಗ್ಯಜಿಲ್ಲೆ

ಕೊರಟಗೆರೆ ಸರ್ಕಾರಿ ಆಸ್ಪತ್ರೆ ಕಾಸು ಕೊಟ್ರೆ ಮಾತ್ರ ಚಿಕಿತ್ಸೆ..!

ವರದಿ : ವಿಜಯ್ ಶಂಕರ್, ಕೊರಟಗೆರೆ

ತುಮಕೂರು: ತುಮಕೂರು ಜಿಲ್ಲೆಯ ಆರೋಗ್ಯ ಇಲಾಖೆ ಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆಯಾ..? ಇಂತಹದ್ದೊಂದು ಪ್ರಶ್ನೆ ಇದೀಗ ಎದುರಾಗಿದೆ. ರಾಜ್ಯದ ಗೃಹ ಸಚಿವರ ತವರು ಕ್ಷೇತ್ರ ಕೊರಟಗೆರೆಯಲ್ಲಿರೋ ಸರ್ಕಾರಿ ಆಸ್ಪತ್ರೆಯಲ್ಲಿ ರಾಜಾ ರೋಷವಾಗಿ ಲಂಚದಾಟ ನಡೆಯುತ್ತಿದೆ. ಕಾಸು ತೋರಿಸಿದ್ರೆ ಮಾತ್ರ ವೈದ್ಯರು ಸ್ಟೆಥಾಸ್ಕೋಪ್ ಹಿಡಿದು ರೋಗಿ ನೋಡುತ್ತಿದ್ದಾರೆ. ಇನ್ನು ಗರ್ಭಿಣಿ ಸ್ತ್ರೀಯರು ಹಣ ಕೊಟ್ರೆ ಮಾತ್ರ ಹೆರಿಗೆ ಎಂಬಾಂತಾಗಿ ಹೋಗಿದೆ ಎಂಬ ಆರೋಪ ಕೇಳಿಬಂದಿದೆ.

ಇಂತಹದ್ದೊಂದು ಗುರುತರ ಆರೋಪ ಮಾಡಿರೋದು ಯಾರೋ ಸಾಮಾನ್ಯರಲ್ಲ.ಸ್ವತಃ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ ಟಿ ತಿಪ್ಪೇಸ್ವಾಮಿ ಯವರೇ ತಾಲ್ಲೂಕ್ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಅವರೇ ಖುದ್ದಾಗಿ ಭೇಟಿ ನೀಡಿ ಬಾಣಂತಿ ಸ್ತ್ರೀಯರಿಗೆ ವಿಚಾರಿಸಿದಾಗ ಸತ್ಯ ಬಯಲಾಗಿದೆಯಂತೆ. ಬಾಣಂತಿಯರೇ ಇವರ ಬಳಿ ಲಂಚದ ವಿಚಾರ ಹೇಳಿಕೊಂಡಿದ್ದಾರಂತೆ.. ಸ್ವಚ್ಛತೆ ಮಾಡುವವರಿಗೆ 100 ರೂ ನೀಡಿದ್ದೇವೆ. ಅಲ್ಲದೆ ವೈದ್ಯರಿಗೆ ಐದು ಸಾವಿರ ರೂಪಾಯಿ ನೀಡಿದ್ದೇವೆ ಎಂದು ದೂರಿದ್ದಾರೆ.

ಇದರ ಬಗ್ಗೆ ತಾಲ್ಲೂಕು ಟಿ ಎಚ್ ಓ. ವಿಜಯ್ ಕುಮಾರ್ ರವರಿಗೆ ವಿಚಾರ ಮಾಡಿದಾಗ ಇದರ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಸಬೂಬು ಹೇಳುತ್ತಾರೆ. ಟಿಹೆಚ್ಓ ಸಾಹೇಬರಿಗೆ ಜಾಣ ಕಿವುಡು.. ಇನ್ನು ತಾಲೂಕು ಆಸ್ಪತ್ರೆಯಲ್ಲಿ ಯಾವುದು ನೆಟ್ಟಗಿಲ್ಲ..ಬಿಸಿ ನೀರು ಬರೋದಿಲ್ಲ..ಬಾಣಂತಿಯರು ಕಾಲ ಕಸಕ್ಕಿಂತ ಕಡೆಯಾಗಿ ಹೋಗಿದ್ದಾರೆ. ಇನ್ನಾದ್ರೂ ಈ ಅವ್ಯವ್ಯಸ್ಥೆಗೆ ಬ್ರೇಕ್ ಬೀಳುತ್ತಾ ಕಾದು ನೋಡಬೇಕು.

 

Comments (0)

Your email address will not be published. Required fields are marked *

Back to top button