#Exclusive NewsTop Newsಜಿಲ್ಲೆದೇಶ/ವಿದೇಶರಾಜ್ಯಸುದ್ದಿ

ಮೈಕ್ರೋ ಫೈನಾನ್ಸ್​ ಕಂಪನಿಗಳ ವಿರುದ್ದ ಕ್ರಮ ಕೈಗೊಳ್ಳುತ್ತಾ ಸರ್ಕಾರ..?

ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿಗೆ ನಿಯಮಬಾಹಿರ ಕ್ರಮಗಳನ್ನು ಕೈಗೊಳ್ಳದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕಟ್ಟಪ್ಪಣೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿನಲ್ಲಿ ಸಾಲ ವಸೂಲಾತಿಗೆ ಹಾಗೂ ಸಾಲ ಕೊಟ್ಟವರ ರಕ್ಷಣೆಗೆ ಸ್ಪಷ್ಟ ನಿಯಮಾವಳಿಗಳಿವೆ. ಇದರ ಬಗ್ಗೆ ಕಾನೂನಿನ ತಿದ್ದುಪಡಿಯ ಪರಿಶೀಲನೆ ನಡೆ ಸಲಾಗುವುದು ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಡಿಕೆ ಶಿವಕುಮಾರ್ ಅವರು, ಸಿಎಂ ನೇತೃತ್ವದಲ್ಲಿ ಸಭೆ ಇದೆ. ಈ ಸಭೆಯಲ್ಲಿ ಯಾವ ರೀತಿಯ ಕಾನೂನು ತರಬೇಕು ಎಂಬುದರ ಕುರಿತು ಕಂದಾಯ ಇಲಾಖೆ ಹಾಗೂ ಗೃಹ ಸಚಿವರು ಚರ್ಚೆ ಮಾಡುತ್ತಾರೆ. ಹಿಂದಿನಿಂದಲೂ ಈ ವಿಚಾರದ ಬಗ್ಗೆ ಅಧ್ಯಯನ ಮಾಡ್ತಿದ್ದೇವೆ. ಸದ್ಯದಲ್ಲೇ ಒಂದು ತೀರ್ಮಾನ ಮಾಡ್ತೇವೆ ಎಂದರು.

 

ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯೆ

ಹಳ್ಳಿಗಳಲ್ಲಿ ಸಣ್ಣಪುಟ್ಟ ಸಾಲಗಳನ್ನು ಜನ ಮಾಡಿದ್ದಾರೆ. ಸಾಲ ಮರುಪಾವತಿ ಶಕ್ತಿಗಿಂತ ಮಿರಿ ಮಾಡಿದ್ದಾರೆ, ಇವರಿಗೆ ಸಾಲ ಮರುಪಾವತಿ ಮಾಡೋಕೆ ಶಕ್ತಿ ಇಲ್ಲದೆ ಇರೋ ವಿಚಾರ ಗೊತ್ತಿದ್ರು ಕಂಪನಿಗಳು ಸಾಲ ಕೊಟ್ಟಿದೆ. ಕೆಲವರು ದುಡಿಕಿನ ಹೆಜ್ಜೆ ಇಡುತ್ತಿದ್ದು, ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿದೆ ಹಾಗಾಗಿ ಇದರ ಬಗ್ಗೆ ಸಿಎಂ ಜೊತೆ ಸಭೆ ಕರೆದಿದ್ದೇವೆ ಎಂದರು.

Comments (0)

Your email address will not be published. Required fields are marked *

Back to top button