ಚಿತ್ರದುರ್ಗ : ನಾವು ದರ್ಶನ್ ಮನೆಗೆ ಹೋಗಿ ಮಾತುಕತೆ ನಡೆಸಿದ್ದೇವೆ, ಹೊಸ ಕಾರು ಬುಕ್ ಮಾಡಿದ್ದೇವೆ ಎಂಬಿತ್ಯಾದಿ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿದ್ದು ಇದರಲ್ಲಿ ಯಾವುದೇ ಹುರುಳಿಲ್ಲ. ಇವೆಲ್ಲ ಸುಳ್ಳು ಸಂಗತಿಗಳಾಗಿವೆ ಎಂದು ದರ್ಶನ್ ಗ್ಯಾಂಗ್ನಿಂದ ಹತ್ಯೆಗೊಳಗಾದ ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವನಗೌಡ್ರು ಹೇಳಿದರು.
ಗುರುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೇಸ್ಬುಕ್ನಲ್ಲಿ ಕೆಲವು ವಿಚಾರಗಳು ಹರಡುತ್ತಿರುವುದು ನಮ್ಮ ಮನಸ್ಸಿಗೆ ನೋವುಂಟಾಗಿದೆ. ನಾವು ನಟ ದರ್ಶನ್ ಮನೆಗೆ ಹೋಗಿದ್ದೆವು. ದರ್ಶನ್ ನಮ್ಮ ಮನೆಗೆ ಬಂದಿದ್ದ ಎಂಬ ಸುದ್ದಿಗಳ ಕೆಲವರು ಫೇಸ್ಬುಕ್ನಲ್ಲಿ ಹರಡುತ್ತ ನಮ್ಮ
ಕುಟುಂಬವನ್ನು ಕೆದಕಿ ನೋವುಂಟು ಮಾಡುತ್ತಿದ್ದಾರೆ. ನಾವು ಯಾರನ್ನು ಭೇಟಿಯಾಗಿಲ್ಲ ಎಂದರು.
Post Views: 371