Thursday, September 11, 2025
18.9 C
Bengaluru
Google search engine
LIVE
ಮನೆ#Exclusive Newsಬಿಗ್​ ಬಾಸ್​ ಮನೆಯಲ್ಲಿ ಪತಿ ಜೊತೆ ಮದುವೆ ಆ್ಯನಿವರ್ಸರಿ ಆಚರಿಸಿಕೊಂಡ ಗೌತಮಿ

ಬಿಗ್​ ಬಾಸ್​ ಮನೆಯಲ್ಲಿ ಪತಿ ಜೊತೆ ಮದುವೆ ಆ್ಯನಿವರ್ಸರಿ ಆಚರಿಸಿಕೊಂಡ ಗೌತಮಿ

ಬಿಗ್ ಬಾಸ್ ಸಿಸನ್​ 11 ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. ಹೀಗಿರುವಾಗ ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ಸ್​ ಶುರುವಾಗಿದೆ. ಮನೆಯಲ್ಲಿರುವ ಸ್ಪರ್ಧಿಗಳ ಕುಟುಂಬಸ್ಥರು ಬಿಗ್ ಬಾಸ್‌ಗೆ ಎಂಟ್ರಿ ಕೊಡ್ತಿದ್ದಾರೆ. ಇದೀಗ ಗೌತಮಿ ಪತಿ ಅಭಿಷೇಕ್ ಆಗಮಿಸಿ, ತಮ್ಮ ಮದುವೆ ಆ್ಯನಿವರ್ಸರಿಯ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಡಿ.31 ಭವ್ಯಾ, ತ್ರಿವಿಕ್ರಮ್ ಹಾಗೂ ರಜತ್ ಕುಟುಂಬ ಆಗಮಿಸಿತ್ತು. ಇಂದು ಮೋಕ್ಷಿತಾ, ಮಂಜು ಹಾಗೂ ಗೌತಮಿ ಕುಟುಂಬ ಆಗಮಿಸಿದೆ. ಮನೆಗೆ ಎಂಟ್ರಿ ಕೊಡುವಾಗಲೇ ಅಭಿಷೇಕ್ ಕೇಕ್ ಹಿಡಿದು ಬಂದರು. ಪತಿಯನ್ನು ನೋಡುತ್ತಿದ್ದಂತೆ ಗೌತಮಿ ಭಾವುಕರಾದರು.

ಬಳಿಕ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಹಾಗೂ ಮೋಕ್ಷಿತಾ, ಮಂಜು ಕುಟುಂಬದ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ, ಪತಿ ಜೊತೆ ನಟಿ ತರಲೆ ಮಾಡಿದರು. ಆ ನಂತರ ಮಂಜು ತಂದೆಯ ಕಾಲಿಗೆ ಬಿದ್ದು ಗೌತಮಿ ದಂಪತಿ ಆಶೀರ್ವಾದ ಪಡೆದರು.ಪತ್ನಿ ಗೌತಮಿಗೆ ಕಾಲಿಗೆ ಗೆಜ್ಜೆ ಮತ್ತು ಸರವನ್ನು ಗಿಫ್ಟ್ ನೀಡಿದ್ದಾರೆ ಸಂತೋಷ ಪಟ್ಟರು.ಈ ವೇಳೆ ಪತಿಯನ್ನು ತಬ್ಬಿ ಮುದ್ದಾಡಿದ್ದಾರೆ.

ಇನ್ನೂ ಅಭಿಷೇಕ್ ಕಾಸರಗೋಡು ಅವರನ್ನು 2018ರ ಡಿ.31 ಗೌತಮಿ ಮದುವೆಯಾದರು. ಚಿತ್ರರಂಗದಲ್ಲಿ ಕ್ಯಾಮರಾಮ್ಯಾನ್ ಆಗಿ ಗುರುತಿಸಿಕೊಂಡಿರುವ ಅಭಿಷೇಕ್ ಅವರು ಪುನೀತ್ ರಾಜ್‌ಕುಮಾರ್ ನಿರ್ಮಾಣದ ಮಾಯಾ ಬಜಾರ್, ಗ್ರಾಮಾಯಣ, ಕೃಷ್ಣ ಟಾಕೀಸ್ ಸೇರಿದಂತೆ ಹಲವು ಚಿತ್ರಗಳಿಗೆ ಅವರು ಕೆಲಸ ಮಾಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments