#Exclusive NewsTop Newsರಾಜಕೀಯರಾಜ್ಯಸುದ್ದಿ
ಅಟಲ್ಜಿ ಜಯಂತಿಗೆ ವಿಶೇಷವಾಗಿ ಶುಭ ಕೋರಿದ ಮೋದಿಜಿ…..!

ಇಂದು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ100 ನೇಯ ಜನ್ಮದಿನ. ವಿಡಿಯೋ ಮೂಲಕ ಪ್ರಧಾನಿ ಮೋದಿ ವಿಶಿಷ್ಟ ಗೌರವವನ್ನು ಸಲ್ಲಿಸಿದ್ಧಾರೆ. ಅಷ್ಟೇ ಅಲ್ಲದೆ ಅವರ ಕಾರ್ಯಗಳನ್ನು ನೆನಪಿಸಿಕೊಂಡಿದ್ದಾರೆ. ಬಲಿಷ್ಠ, ಸಮೃದ್ಧ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರು, ಅವರ ದೃಷ್ಟಿ ಮತ್ತು ಧ್ಯೇಯ ಎರಡೂ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡುವ ಕುರಿತಾಗಿತ್ತು ಎಂದು ನರೇಂದ್ರ ಮೋದಿಜಿ ಅವರು ತಮ್ಮ ಎಕ್ಷ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.




