ರಾಜ್ಯಸುದ್ದಿ

ಸಿದ್ದರಾಮಯ್ಯ ಹೆಂಡ್ತಿಗೆ ಹ್ಯಾಂಡ್ ಸಮನ್ಸ್ ನೀಡೋಕೆ ಹೇಳಿದ ಹೈಕೋರ್ಟ್

ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಪತ್ನಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರ ಸ್ನೇಹಮಯಿ ಕೃಷ್ಣಗೆ ಸಿಎಂ ಪತ್ನಿ ಮತ್ತು ಬಾವಮೈದುನಗೆ ಹ್ಯಾಂಡ್ ಸಮನ್ಸ್ ನೀಡಬೇಕಂತಾ ಹೇಳಿದೆ.
ಹೈಕೋರ್ಟ್ ಈ ಹಿಂದೆ ನೀಡಿದ್ದ ಸೂಚನೆಯಂತೆ ಡಿ.9ರವರೆಗೆ ನಡೆಸಿರುವ ತನಿಖೆಯ ವಸ್ತುಸ್ಥಿತಿಯನ್ನ ಲೋಕಾಯುಕ್ತ ಪೊಲೀಸರು ಕೋರ್ಟ್ಗೆ ಸಲ್ಲಿಸಿದ್ರು. ಇದ್ರೊಂದಿಗೆ ಪ್ರಕರಣದ ಕೇಸ್ ಡೈರಿ ಮತ್ತು ಸಾಕ್ಷಿಗಳ ಹೇಳಿಕೆಗಳನ್ನೊಳಗೊಂಡ ಮತ್ತೊಂದು ವರದಿಯನ್ನ ಮುಚ್ಚಿದ ಲಕೋಟೆಯಲ್ಲಿ ಲೋಕಾಯುಕ್ತ ಪರ ವಕೀಲರು ಕೋರ್ಟ್ಗೆ ಸಲ್ಲಿಸಿದ್ರು. ಡಿ.24 ರಂದು ಮತ್ತೆ ಈ ಕೇಸ್ ಕೋರ್ಟ್ ಮುಂದೆ ವಿಚಾರಣೆಗೆ ಬರಲಿದ್ದು, ಆಗಲೂ ತನಿಖೆಯ ವಿವರ ಕೊಡಬೇಕಂತ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ರು. ಸರ್ಕಾರದ ಪರ ವಾದ ಮಂಡಿಸಿದ್ದಂಥ ಹಿರಿಯ ವಕೀಲ ಕಪಿಲ್ ಸಿಬಲ್, ನ್ಯಾಯಾಲಯ ಜಾರಿಗೊಳಿಸಿರೋ ನೊಟೀಸ್ ಸಿಎಂ ಪತ್ನಿ ಪಾರ್ವತಿ ಮತ್ತು ಬಾವಮೈದುನ ಮಲ್ಲಿಕಾರ್ಜುನ್ಗೆ ತಲುಪಿಲ್ಲ ಅಂತ್ಹೇಳಿದ್ದಾರೆ. ಅರ್ಜಿಯಲ್ಲಿ ಇಡಿಯನ್ನ ಪ್ರತಿವಾದಿಯನ್ನಾಗಿಸ್ಬೇಕಂತ ಸಿಎಂ ಪತ್ನಿ ಪಾರ್ವತಿ ವಿರುದ್ಧ ಮುಡಾ ದೂರು ದಾಖಲಿಸಿರೋ ಸ್ನೇಹಮಯಿ ಕೃಷ್ಣ ಮಧ್ಯಂತರ ಮನವಿ ಸಲ್ಲಿಸಿದ್ದಾರೆ. ಇನ್ನು ಅದಕ್ಕೆ ಆಕ್ಷೇಪಣೆ ಸಲ್ಲಿಸಬೇಕಾಗಿರೋದ್ರಿಂದ ಮತ್ತು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ವಿಚಾರಣೆಗೆ ಬಾಕಿಯಿರೋದ್ರಿಂದ ಈ ಅರ್ಜಿ ವಿಚಾರಣೆ ಮುಂದೂಡಿದ್ರೆ ಒಳ್ಳೇದು ಅಂತ ಕೋರ್ಟ್ಗೆ ಮನವಿ ಮಾಡಿದ್ದಾರೆ. ಇದಕ್ಕೆ ವಕೀಲರಾದ ಕಪಿಲ್ ಸಿಬಲ್ ಮತ್ತು ದುಷ್ಯಂತ್ ಧವೆ ಆಕ್ಷೇಪ ವ್ಯಕ್ತಪಡಿಸಿದ್ರೂ ಅಗತ್ಯಬಿದ್ರೆ ಈ ಮನವಿಯನ್ನ ಮುಂದಿನ ವಿಚಾರಣೆಗೆ ಪರಿಗಣಿಸೋದಾಗಿ ಕೋರ್ಟ್ ಹೇಳಿದೆ.

 

 

 

 

Comments (0)

Your email address will not be published. Required fields are marked *

Back to top button