
ಬೀದರ್: ವಕ್ಫ್ ವಿರುದ್ಧ ಬಿಜೆಪಿ ನಾಯಕರು ಸಮರ ಸಾರಿದ್ದು, ಒಂದೆಡೆಯಾದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮೂರು ತಂಡಗಳನ್ನು ರಚನೆ ಮಾಡಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ರೆಬಲ್ಸ್ ನಾಯಕರ ತಂಡವು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಗಡಿ ಜಿಲ್ಲೆ ಬೀದರ್‌ನಿಂದ ಪ್ರತ್ಯೇಕ ಹೋರಾಟ ಆರಂಭಿಸಿದೆ.ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದಲ್ಲಿ ವಕ್ಫ್ ಹಟಾವೋ ದೇಶ ಬಚಾವ್ ಹೋರಾಟ ಬೀದರ್‌ನಲ್ಲಿ ಪ್ರತಿಭಟಿಸುತ್ತಿದೆ.
ವಕ್ಫ್ ವಿರುದ್ಧ ರೆಬೆಲ್ ನಾಯಕರು ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ಮಧ್ಯೆ ಇದೀಗ ವಕ್ಫ್ ಬಗ್ಗೆ ಹಳ್ಳಿ-ಹಳ್ಳಿಗೂ ಹೋಗಿ ಕರಾಳ ಶಾಸನದ ಬಗ್ಗೆ ಜನರಲ್ಲಿ ಜಾಗೃತಿ ಮಾಡುವ ಅವಶ್ಯಕತೆ ಇದೆ. ಇದನ್ನು ನಾವು ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಾಲ್ಕು ಪಾಕಿಸ್ತಾನ ಆಗುವಷ್ಟು ಆಸ್ತಿಗೆ ಬೇಡಿಕೆ!
ಇನ್ನು ವಕ್ಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಯತ್ನಾಳ್, ರಾಜ್ಯದ ಈಶಾನ್ಯ ಭೂಮಿ ದರ್‌ನಿಂದ ವಕ್ಪ್ ಜಾಗೃತಿ ಅಭಿಯಾನ ಮಾಡುತ್ತಿದ್ದೇವೆ, ಗೋಮಾತೆ, ನರಸಿಂಹಸ್ವಾಮಿ ಪೂಜೆಯೊಂದಿಗೆ ಈ ಅಭಿಯಾನ ಅರಂಭಿಸಿದ್ದೇವೆ. ಭಾರತ ಸರ್ಕಾರದ ಲೆಕ್ಕಪತ್ರದಲ್ಲಿ 9 ಲಕ್ಷ 50 ಸಾವಿರ ಆಸ್ತಿ ಇದೆ. ಆದರೆ ಇದರಲ್ಲಿ 38 ಲಕ್ಷ ಎಕರೆ ವಕ್ಫ್ ಆಸ್ತಿ ಇದೆ ಅಂತಾ ಬೇಡಿಕೆ ಇಟ್ಟಿದ್ದಾರೆ. ನಾಲ್ಕು ಪಾಕಿಸ್ತಾನ ಆಗುವಷ್ಟು ಆಸ್ತಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ವಕ್ಫ್ ಬಗ್ಗೆ ಹಳ್ಳಿ-ಹಳ್ಳಿಗೂ ಹೋಗಿ ಕರಾಳ ಶಾಸನದ ಬಗ್ಗೆ ಜನರಲ್ಲಿ ಜಾಗೃತಿ ಮಾಡುವ ಅವಶ್ಯಕತೆ ಇದೆ ಎಂದು ಯತ್ನಾಳ್ ಹೇಳಿದ್ದಾರೆ.
ಪ್ರತಿ ಜಿಲ್ಲೆಯಲ್ಲೂ ಪ್ರವಾಸ ಕೈಗೊಂಡು ಹೋರಾಟ!
ಪ್ರತಿ ಜಿಲ್ಲೆಯಲ್ಲೂ ಪ್ರವಾಸ ಕೈಗೊಂಡು ಅಲ್ಲಿ ಬಾಧಿತರ ಬಗ್ಗೆ ಪಾರ್ಲಿಮೆಂಟರಿ ಬೋರ್ಡ್‌ಗೆ ಕೊಡೋಕೆ ಗಮನಕ್ಕೆ ತರುತ್ತೇವೆ. ಈ ಬಗ್ಗೆ ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ಹೋರಾಟ ಮಾಡ್ತೇವೆ. ನಾವು ಪ್ರತಿಷ್ಟೆಗಾಗಿ ಹೋರಾಟ ಮಾಡ್ತಿಲ್ಲ, ರೈತರಿಗಾಗಿ ಹೋರಾಡುತ್ತಿದ್ದೇವೆ ಎಂದರು. ಪ್ರಧಾನಿ ಮೋದಿಯವರು ಕೂಡಾ ಸಂವಿಧಾನದಲ್ಲಿರುವುದನ್ನೇ ಇಂಪ್ಲಿಮೆಂಟ್ ಮಾಡ್ತೀವಿ ಅಂತಾ ಹೇಳಿದ್ದರು. ಆದರೆ ಈಗ ಪ್ರಧಾನಿ ಮೋದಿಯವರಿಗೂ ಬೆದರಿಕೆ ಹಾಕುತ್ತಿದ್ದಾರೆ. ಪ್ರಧಾನಿಗಳ ಕೈ ಬಲಪಡಿಸಲು ನಮ್ಮ ತಂಡ ಹೋರಾಟ ಮಾಡ್ತಿದೆ ಎಂದು ಯತ್ನಾಳ್ ಹೇಳಿದರು.
ದೇಶದಲ್ಲಿ ನೆಹರೂಯಿಂದ ಮನಗೋಹನ್ ಸಿಂಗ್ ವರೆಗೂ ವಕ್ಫ್ ಗೆ ಅಧಿಕಾರ ಕೊಟ್ಟಿದ್ದಾರೆ
ಜಿಲ್ಲೆಯ ಧರ್ಮಪುರಿ ಗ್ರಾಮದಲ್ಲಿ ಮಾತನಾಡಿದ ಯತ್ನಾಳ್, ದೇಶದಲ್ಲಿ ನೆಹರೂಯಿಂದ ಮನಗೋಹನ್ ಸಿಂಗ್ ವರೆಗೂ ವಕ್ಫ್ ಗೆ ಅಧಿಕಾರ ಕೊಟ್ಟಿದ್ದಾರೆ. ಅವರಿಗೆ ಈಗ ಎಲ್ಲ ಅಧಿಕಾರ ಇದೆ ಅಂತ ರಾತ್ರಿ ಹಾಕ್ತಾರೆ ಬೆಳಗ್ಗೆ ತೆಗೀತಾರೆ. ರೈತರ ಮೇಲೆ ವಕ್ಫ್ ಅಧಿಕಾರಿಗಳು ದಬ್ಬಾಳಿಕೆ ಮಾಡ್ತಾ ಇದ್ದಾರೆ. ಜನ ಜಾಗೃತಿ ಆಗಬೇಕು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಕರೆ ಕೊಟ್ಟರು.




