ರಾಜ್ಯಸುದ್ದಿ

Hassan | ವಿಕ್ರಂ ಸಿಂಹನಿಗೆ ಜಾಮೀನು ಮಂಜೂರು: ಬೇಲೂರು ಸಿವಿಲ್​ ನ್ಯಾಯಧೀಶರಿಂದ ಆದೇಶ

ಕಾಡಿನಲ್ಲಿ ಮರ ಕಡಿದ ಆರೋಪ ಎದುರಿಸುತ್ತಿದ್ದ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ ಸಿಂಹಗೆ ಜಾಮೀನು ಮಂಜೂರಾಗಿದೆ. ಬೇಲೂರು ಸಿವಿಲ್ ನ್ಯಾಯಾಧೀಶರು ಜಾಮೀನು ಆದೇಶ ಹೊರಡಿಸಿದ್ದಾರೆ.

ಮರ ಕಡಿದು ಸಾಗಾಟ ಪ್ರಕರಣದಲ್ಲಿ ನಿನ್ನೆ ವಿಕ್ರಂ ಸಿಂಹ ಬಂಧನವಾಗಿತ್ತು. ಹಾಸನದಲ್ಲಿ 126 ಮರಗಳನ್ನ ಕಡಿದ ಬಗ್ಗೆ ದೂರು ದಾಖಲಾಗಿತ್ತು. ಈ ಕುರಿತಂತೆ ನ್ಯಾಯಾಲಯಕ್ಕೆ ವಕೀಲರಾದ ಧರ್ಮೆಗೌಡ ಮತ್ತು ಚಂದ್ರೇಗೌಡ ಜಾಮೀನು ಅರ್ಜಿ ಸಲ್ಲಿಸಿದ್ದರು. ರಾಜಕೀಯ ಪಿತೂರಿಯಿಂದ ನನ್ನ ಬಂಧನವಾಗಿತ್ತು. ಇದೀಗ ಜಾಮೀನು ಸಿಕ್ಕಿದೆ. ನಾನು ಪರಿಸರ ಪ್ರೇಮಿ. ಸುಖಸುಮ್ಮನೇ ನನ್ನ ಮೇಲೆ ಆರೋಪ ಹೊರಿಸಲಾಗಿದೆ ಎಂದು ಜಾಮೀನು ಪಡೆದು ನ್ಯಾಯಾಧೀಶರ ಮನೆಯಿಂದ ಹೊರ ಬಂದ ವಿಕ್ರಂ ಸಿಂಹ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button