ಮನರಂಜನೆ

ಹೊಸ ವರ್ಷಕ್ಕೆ ನಂದಿಬೆಟ್ಟಕ್ಕೆ ಹರಿದು ಬರುವ ಪ್ರವಾಸಿಗರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಶಾಕ್‌ ನೀಡಿದೆ.


ಚಿಕ್ಕಬಳ್ಳಾಪುರ :ಮೋಜು ಮಸ್ತಿಗೆಂದು ನಂದಿ ಗಿರಿಧಾಮನಕ್ಕೆ ಆಗಮಿಸಿಸುವ ಪ್ರವಾಸಿಗರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರಾಸೆ ಮೂಡಿಸಿದೆ. ಡಿಸೆಂಬರ್ 31 ರಿಂದ ಜನವರಿ 1 ರ ಸಂಜೆವರೆಗೂ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ನಿಷೇಧ ಹೇರಿದ್ದಾರೆ.

ರಾಜಧಾನಿಗೆ ಕೂಗಳತೆಯ ದೂರದಲ್ಲಿರುವ ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ಪ್ರತಿ ವೀಕೆಂಡ್ ಬಂತಂದ್ರೆ ಸಾಕು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು,ಪ್ರಕೃತಿ ಪ್ರಿಯರು ಭೇಟಿ ಕೊಟ್ಟು ಎಂಜಾಯ್ ಮಾಡುತ್ತಾರೆ.ಇದರ ನಿಟ್ಟಿನಲ್ಲಿಯೇ ನೂತನ ವರ್ಷಕ್ಕೆ ನಂದಿಗಿರಿಧಾಮಕ್ಕೆ ಬಂದು ಎಂಜಾಯ್ ಮಾಡೋಣಾ ಎಂದು ಪ್ಲಾನ್ ಮಾಡಿದ್ದ ಪ್ರಕೃತಿ ಪ್ರೀಯರಿಗೆ ಸದ್ಯ ಇದು ಬೇಸರದ ಸುದ್ದಿಯಂತು ನಿಜಾ…

ನೂತನ ವರ್ಷಾಚರಣೆಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ವಿಶ್ವವಿಖ್ಯಾತ ನಂದಿ ಹಿಲ್ಸ್ ಪ್ರವೇಶಕ್ಕೆ ನಿರ್ಭಂದ ವಿಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹೇಳಿಕೆ ನೀಡಿದ್ದಾರೆ.. ಡಿಸೆಂಬರ್ 31 ರ ಸಂಜೆ 6 ಗಂಟೆಯಿಂದ ಜನವರಿ 1, 2024ರಂದು ಬೆಳಿಗ್ಗೆ 6 ಗಂಟೆವರೆಗೂ ನಿಷೇಧ ಮಾಡಲಾಗಿದ್ದು, ಹೊಸ ವರ್ಷಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ನಿರ್ಣಯ ಕೈಗೊಂಡಿದ್ದು, ಹೊಸ ವರ್ಷಾಚರಣೆಗೆ ನಂದಿ ಹಿಲ್ಸ್ ಗೆ ಯಾರೂ ಬಾರದಂತೆ ಜಿಲ್ಲಾಧಿಕಾರಿ ರವೀಂದ್ರ ಮನವಿ ಮಾಡಿದ್ದಾರೆ.

ಅಷ್ಟೇ ಅಲ್ಲದೆ ನಂದಿ ಗಿರಿಧಾಮ ಕೆಳಭಾಗದ ರೆಸ್ಟೋರೆಂಟ್ ಗಳಿಗೂ ಕೆಲ ನಿರ್ಬಂಧ ಗಳನ್ನು ಪೊಲೀಸ್ ಇಲಾಖೆ ನೀಡಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Comments (0)

Your email address will not be published. Required fields are marked *

Back to top button