
Ayodhya : ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಟಾಪನೆ ಜನವರಿ 22 ರಂದು ನಡೆಯಲಿದೆ. ಆ ದಿನ ಗರ್ಭಗುಡಿಯಲ್ಲಿ ಸಾಕಷ್ಟು ಪೂಜಾ ವಿಧಿ ವಿಧಾನಗಳು ನಡೆಯಲಿವೆ. ಆ ದಿನ ಗರ್ಭಗುಡಿಯಲ್ಲಿ ಜಸ್ಟ್ ಐವರಿಗೆ ಮಾತ್ರ ಪ್ರವೇಶಿಸೋಕೆ ಅವಕಾಶ ಕಲ್ಪಿಸಲಾಗಿದೆ. ಇಷ್ಟಕ್ಕೂ ಅವತ್ತು ರಾಮ ಮಂದಿರದ ಗರ್ಭಗುಡಿಯಲ್ಲಿ ಯಾರ್ಯಾರು ಇರಲಿದ್ದಾರೆ ಅಂತ ನೋಡೋದಾದ್ರೆ, ಪೂಜಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅವರೊಟ್ಟಿಗೆ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಮಂದಿರದ ಮುಖ್ಯ ಅರ್ಚಕ ಮಾತ್ರ ಇರಲಿದ್ದಾರೆ.

ಪ್ರಾಣ ಪ್ರತಿಷ್ಟಾಪನೆ ಸಂದರ್ಭದಲ್ಲಿ ಗರ್ಭಗುಡಿಯ ಪರದೆಯನ್ನು ಮುಚ್ಚಲಾಗುವುದು. ಬಳಿಕ ಪ್ರಾಣ ಪ್ರತಿಷ್ಟಾಪನೆ ಪೂಜಾ ವಿಧಿ ವಿಧಾನಗಳನ್ನ ನೆರವೇರಿಸಲಾಗುವುದು. ಇದೆಲ್ಲವನ್ನೂ ಈ ಐವರ ಸಮ್ಮುಖದಲ್ಲಿ ನಡೆಸಲಾಗುವುದು. ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಪ್ರಾಣ ಪ್ರತಿಷ್ಟಾಪನೆ ಬಳಿಕ ವಿಗ್ರಹಕ್ಕೆ ಮೊದಲು ಕನ್ನಡಿಯನ್ನ ತೋರಿಸಲಾಗುತ್ತದೆ. ನಂತರ ಮೂವರು ಅರ್ಚಕರ ನೇತೃತ್ವದಲ್ಲಿ ದಾಲ್ ಪೂಜೆ ನೆರವೇರಲಿದೆ.

ಮೊದಲ ತಂಡದ ನೇತೃತ್ವವನ್ನು ಸ್ವಾಮಿ ಗೋವಿಂದ ದೇವ್ ಗಿರಿ ಮುನ್ನೆಡೆಸಿದ್ರೆ, ಕಾಂಚಿ ಕಾಮಕೋಟಿ ಪೀಠದ ವಿಜಯೇಂದ್ರ ಶ್ರೀಗಳು ಎರಡನೇ ತಂಡವನ್ನ ಮುನ್ನೆಡಸಲಿದ್ದಾರೆ. ಇನ್ನು ಕಾಶಿಯಲ್ಲಿರುವ 21 ಮಂದಿ ಧಾರ್ಮಿಕ ವಿದ್ವಾಂಸರು ಮೂರನೇ ತಂಡವಾಗಿ ಧಾರ್ಮಿಕ ವಿಧಿ ವಿಧಾನಗಳನ್ನ ನಡೆಸಿಕೊಡ್ತಾರೆ. ಆ ದಿನ ವಿಶೇಷ ಪೂಜೆಗಳು ನಡೆಯಲಿದ್ದು ಅವುಗಳನ್ನ ಕಣ್ತುಂಬಿಕೊಳ್ಳೋ ಭಾಗ್ಯ ಈ ಐವರದ್ದಾಗಿರುತ್ತದೆ.




