ಜಿಲ್ಲೆರಾಜ್ಯ

ಹೊಸ ವರ್ಷಕ್ಕೆ ಇಸ್ರೋ ಹೊಸ ಸಾಧನೆ ಕಪ್ಪು ಕುಳಿಗಳ ಅಧ್ಯಯನಕ್ಕೆ ಉಪಗ್ರಹ..!

ಇಸ್ರೋ ವಿಶೇಷ ಉಪಗ್ರಹವನ್ನು ಹೊತ್ತ ‘ಪಿಎಸ್‌ಎಲ್‌ವಿ’ ರಾಕೆಟ್‌ ಜ. 1ರ ಬೆಳಗ್ಗೆ 9:10ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾಯನವಾಗಲಿದೆ.


ಚಂದ್ರಯಾನ- 3, ಸೂರ್ಯಯಾನ ಯಶಸ್ಸಿನ ಮೂಲಕ ವಿಶ್ವದ ಗಮನ ಸೆಳೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಹೊಸ ವರ್ಷದ ಆರಂಭದಂದೇ ಮತ್ತೊಂದು ಮೈಲುಗಲ್ಲು ಸಾಧನೆಗೆ ಸಜ್ಜಾಗಿದೆ.


2023ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತೇ ಕೊಂಡಾಡುವ ಸಾಧನೆ ಮಾಡಿರುವ ಭಾರತದ ಇಸ್ರೋ, 2024ರ ಆರಂಭದಲ್ಲಿಯೇ ಹೊಸ ಮೈಲುಗಲ್ಲು ಸ್ಥಾಪನೆಯತ್ತ ಸಾಗಿದೆ. ದೇಶದ ಮೊದಲ ಎಕ್ಸ್‌- ರೇ ಪೋಲಾರಿಮೀಟರ್ ಉಪಗ್ರಹವನ್ನು ಜನವರಿ 1ರಂದು ಇಸ್ರೋ ಉಡಾವಣೆ ಮಾಡಲಿದೆ.

ಐದು ವರ್ಷ ಅಧ್ಯಯನ

‘ಎಕ್ಸ್‌ಪೋಸ್ಯಾಟ್‌’ ಉಪಗ್ರಹವು ಕಪ್ಪು ಕುಳಿ, ಎಕ್ಸ್‌-ರೇ ಬೈನರಿಗಳು, ಸಕ್ರಿಯ ಗ್ಯಾಲಕ್ಸಿ ನ್ಯೂಕ್ಲಿಯಸ್‌ಗಳು, ನ್ಯೂಟ್ರಾನ್‌ ನಕ್ಷತ್ರಗಳು ಮತ್ತು ಉಷ್ಣವಲ್ಲದ ಸೂಪರ್ನೋವಾ ಅವಶೇಷಗಳು ಸೇರಿದಂತೆ ಬ್ರಹ್ಮಾಂಡದ 50 ಪ್ರಕಾಶಮಾನವಾದ ಮೂಲಗಳನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. ಈ ಉಪಗ್ರಹವನ್ನು 500- 700 ಕಿ.ಮೀ ಉದ್ದದ ವೃತ್ತಾಕಾರದ ಭೂಮಿಯ ಕೆಳ ಕಕ್ಷೆಯಲ್ಲಿ ಇರಿಸಲಾಗುವುದು. ಇದರ ಜೀವಿತವಾವಧಿ ಕನಿಷ್ಠ ಐದು ವರ್ಷ ಎಂದು ಇಸ್ರೋ ತಿಳಿಸಿದೆ.

Comments (0)

Your email address will not be published. Required fields are marked *

Back to top button