#Exclusive NewsTop Newsಜಿಲ್ಲೆಫ್ರೀಡಂ ಟಿವಿ ವಿಶೇಷರಾಜ್ಯವಿಶೇಷವೈರಲ್ ನ್ಯೂಸ್ಸುದ್ದಿ

89ರ ಹರೆಯದಲ್ಲಿ ಪಿಎಚ್‌ಡಿ ಪದವಿ ಪಡೆದ ಮಾರ್ಕಂಡೇಯ!

ಜ್ಞಾನ ಪಡೆಯಲು ವಯಸ್ಸಿನ ಮಿತಿ ಇಲ್ಲ ಎನ್ನುವುದಕ್ಕೆ ಇವರೇ ಸಾಕ್ಷಿ. ಸತತವಾಗಿ 18 ವರ್ಷ ಒಂದು ವಿಷಯವನ್ನು ಅಧ್ಯಯನ ಮಾಡಿ ತಮ್ಮ 89ನೇ ವಯಸ್ಸಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ನಿವೃತ್ತ ಶಿಕ್ಷಕರು, ಧಾರವಾಡ ಜಿಲ್ಲೆಯ ಜಯನಗರ ನಿವಾಸಿ ಮಾರ್ಕಂಡೇಯ ದೊಡ್ಮನಿ ಕರ್ನಾಟಕ ವಿವಿಯ 74 ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿ ಪಡೆದ ಅತ್ಯಂತ ಹಿರಿಯರು ಎನ್ನುವ ಹೆಗ್ಗಳಿಕೆಗೂ ಪಾತ್ರರಾದರು. ಇವರು ಸತತ 18 ವರ್ಷ ಡೋಹರ ಕಕ್ಕಯ್ಯನವರ ವಚನ ಮತ್ತು ಜೀವನ ಸಾಧನೆಯ ಬಗ್ಗೆ ಅಧ್ಯಯನ ನಡೆಸಿ, ‘ಶಿವಶರಣ ಡೋಹರ ಕಕ್ಕಯ್ಯ ಒಂದು ಅಧ್ಯಯನ’ ಎಂಬ ಮಹಾಪ್ರಬಂಧ ಮಂಡಿಸಿ ಕನ್ನಡ ಅಧ್ಯಯನ ಪೀಠದ ಪಿಎಚ್‌ಡಿ ಪದವಿ ಜತೆಗೆ ಡಾ. ಮಾರ್ಕಂಡೇಯ ಆಗಿ ಹೊರಹೊಮ್ಮಿದರು.

Comments (0)

Your email address will not be published. Required fields are marked *

Back to top button