#Exclusive NewsTop Newsರಾಜಕೀಯರಾಜ್ಯವಿಶೇಷಸುದ್ದಿ

ಕಾಂಗ್ರೆಸ್ ಹೈಕಮಾಂಡ್ ಅಂಗಳ ತಲುಪಿದ ಮತ್ತೊಂದು ಪತ್ರ…..

ಸಿಎಂ ಖುರ್ಚಿ ಚರ್ಚೆ ವಿಚಾರ ಕಾಂಗ್ರೆಸ್ ಹೈಕಮಾಂಡ್ ಅಂಗಳ ತಲುಪಿದ ಮತ್ತೊಂದು ಪತ್ರ. ಸಿದ್ದರಾಮಯ್ಯ ಪರ ಬಣದಿಂದ ರಾಹುಲ್ ಗಾಂಧಿಗೆ ಪತ್ರ. ಸಿದ್ದರಾಮಯ್ಯ ಮುಡಾ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್​ನ ಕೆಲ ಸಚಿವರು ಸಿಎಂ ಸ್ಥಾನದ ಆಕಾಂಕ್ಷಿ ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನಲೆ ಸಚಿವರಿಗೆ ಕಡಿವಾಣ ಹಾಕುವಂತೆ 15ಕ್ಕೂ ಹೆಚ್ಚು ಕಾಂಗ್ರೆಸ್​​ನ ನಾಯಕರು ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.‘ನಾವು ಹೋರಾಡಬೇಕಾಗಿರುವುದು ಬಿಜೆಪಿ-JDS ವಿರುದ್ಧ, ಅದನ್ನು ಮರೆತಿದ್ದಾರೆ. ಅದರ ಬದಲು ಸಚಿವರಿಂದ ಸಿಎಂ ಸ್ಥಾನದ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಜನರಿಗೆ ನಮ್ಮ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಹೋಗುತ್ತಿದೆ. ಕೂಡಲೇ ಸಚಿವರಿಗೆ ಸೂಚಿಸಿ ಗೊಂದಲಕಾರಿ ಹೇಳಿಕೆಗೆ ಕಡಿವಾಣ ಹಾಕಿ ಎಂದು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.   ಬಿ.ಎಲ್.ಶಂಕರ್, ವಿ.ಎಸ್.ಉಗ್ರಪ್ಪ, ಬಿ.ಎನ್.ಚಂದ್ರಪ್ಪ, ಎಲ್.ಹನುಮಂತಯ್ಯ, ರಾಣಿ ಸತೀಶ್, ವಿ.ಆರ್.ಸುದರ್ಶನ್, ಎಚ್ .ಎಂ.ರೇವಣ್ಣ, ಎಚ್.ಡಿ.ಅಮರನಾಥ್, ಸಿ.ಎಸ್.ದ್ವಾರಕನಾಥ್, ಪಿ.ಆರ್.ರಮೇಶ್ ಸೇರಿದಂತೆ ಪ್ರಮುಖ ನಾಯಕರು  ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ. ಇನ್ನು ಈ ಕುರಿತು ಕಾಂಗ್ರೆಸ್​ ವಿಧಾನಪರಿಷತ್ ಸದಸ್ಯರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಂಜುನಾಥ್ ಭಂಡಾರಿ ಸೇರಿ ಸಿಎಂ ಕುರ್ಚಿ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಿ ಎಂದು ಖರ್ಗೆ ಅವರಿಗೆ ಪತ್ರ ಬರೆದಿದ್ದರು. ಪಕ್ಷದ ನಿಯಮ ಉಲ್ಲಂಘಿಸಿ ಬಹಿರಂಗವಾಗಿಯೇ ಸಚಿವರು ಸಿಎಂ ಸ್ಥಾನದ ಆಕಾಂಕ್ಷೆ ಹೇಳಿಕೆ ನೀಡುತ್ತಿದ್ದಾರೆ. ಸಚಿವರ ಲಗಾಮಿಲ್ಲದ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್​ ಆಗುತ್ತಿದೆ. ಅಷ್ಟೇ ಅಲ್ಲದೆ ಈ ಹೇಳಿಕೆಗಳಿಂದ ಸರ್ಕಾರ ಅಭದ್ರವಾಗುವ ಸಾಧ್ಯತೆ ಇದೆ ಎಂದು ಪತ್ರದ ಮೂಲಕ ತಿಳಿಸಿದ್ದರು.

 

 

 

 

Comments (0)

Your email address will not be published. Required fields are marked *

Back to top button