
ಮೇಲಿನ ವಿಷಯ ಕುರಿತು ನಮ್ಮ ಸಂಘಟನೆ ಕಳೆ 5 ವರ್ಷದಿಂದಲೂ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜ್‌ನಲ್ಲಿ ನಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಸರ್ಕಾರ ಕೊಡುವ ರಾಜ್ಯದ ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪರಿಗಣಿಸಬೇಕೆಂದು ಹಲವು ಬಾರಿ ಕೇಳಿಕೊಂಡರೂ ನಮ್ಮನ್ನು ಕಡೆಗಣಿಸುತ್ತಿರುವುದು ಖಂಡನೀಯ. ಶಿಕ್ಷಕರ ಕಲ್ಯಾಣ ನಿಧಿಗೆ ಸಂಗ್ರಹಿಸುತ್ತಿರುವ ಹಣ ದಲ್ಲಿ ಶೇ 80 ರಷ್ಠು ನಮ್ಮಿಂದಲೇ ಆಗುತ್ತಿರುವುದು. ಆದರೆ ಆ ನಿಧಿ ಯಿಂದ ಬಿಡಿಗಾಸು ನಮ್ಮ ಸಮಸ್ಸೆಗಳಿಗೆ ನೀಡುತ್ತಿಲ್ಲ. ಬದಲಾಗಿ ಶಿಕ್ಷಕರ ಭವನ ಕಟ್ಟಲು, ಶಿಕ್ಷಣ ಇಲಾಖಾ ಪ್ರಧಾನ ಕಾರ್ಯಧರ್ಶಿಗಳು, ಶಿಕ್ಷಣ ಇಲಾಖಾ ಆಯುಕ್ತರು ಮತ್ತು ಇತರೆ ಉನ್ನತ ಅಧಿಕಾರಿಗಳ TA DA ರೂಪದಲ್ಲಿ ಅವರ ಮೋಜು ಮಸ್ತಿಗೆ ಬಳಸುತ್ತಿರುವುದು ಖಾನೂನು ಉಲ್ಲಂಘನೆ ಅಲ್ಲವೇ. ಈ ವಿಚಾರಗಳಲ್ಲಿ ಮಧ್ಯವರ್ತಿಗಳಿಗೆ ಹಣ ಮಾಡಲು ಇಲಾಖೆ ಸಹಕರಿಸುತ್ತಿರುವ ಗುಮಾನಿ ಇದೆ.ಇನ್ನು ಇದೇ ನಿಧಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯದ ಅತ್ಯಂತ ಹೆಚ್ಚು ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರನ್ನು ದೇಶದ ಪ್ರಜ್ಞಾವಂತ ಸಂಪನ್ಮೂಲ ವಾಗಿಸುವ ಖಾಸಗೀ ಶಾಲಾ ಕಾಲೇಜು ಶಿಕ್ಷಕ ವರ್ಗದವರಿಗೆ ಸಂಪೂರ್ಣವಾಗಿ ಕಡೆಗಣಿಸುತ್ತಿರುವುದು ಕಂಡನಿಯಾ. ಸರ್ಕಾರದ ಈಧೋರಣೆ ವಿರುದ್ಧ ಕಳೆದ ಒಂದು ವಾರದಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಬಟನೆ ವ್ಯಕ್ತ ಪಡಿಸುತ್ತಿದ್ದೇವೆ. ಮುಂದುವರೆಸಿ ಶಿಕ್ಷಕರ ದಿನಾಚರಣೆಯಂದೂ ಸಹ ಶಿಕ್ಷಕರ ಕರಾಳ ದಿನವಾಗಿ ಆಚರಿಸಲು ಕೃಪಾ ಸಂಘಟನೆ ನೇತೃತ್ವದಲ್ಲಿ ನಿರ್ಧರಿಸಲಾಗಿದೆ.




