ಸಿನಿಮಾ

ಮುಂದಿನ ಸಿನಿಮಾದಲ್ಲಿ ರಿಯಲ್ ಗೋಲ್ಡ್ ಧರಿಸ್ತಾರ ಯಶ್..?

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಅಧಿಕೃತವಾಗಿ ಘೋಷಣೆ ಆಗುವ ಮುನ್ನವೇ ದಿನಕ್ಕೊಂದು ಸುದ್ದಿ ಸಿನಿಮಾ ಬಗ್ಗೆ ಸೆಟ್ ನಿಂದ ಕೇಳಿ ಬರ್ತಿದೆ.

ಪಾನ್ ಇಂಡಿಯಾ ಲೆವೆಲ್ ನಲ್ಲಿ ಯಶ್ ಅಭಿಮಾನಿಗಳನ್ನು ಹೊಂದಿದ್ದು, ಸಹಜವಾಗಿ ರಾಮಾಯಣ ಚಿತ್ರದಲ್ಲಿ ಯಶ್ ಪಾತ್ರದ ಬಗ್ಗೆ, ಸಿನೆಮಾ ಬಗ್ಗೆ,ಫ್ಯಾನ್ಸ್ ಗೆ ಕುತೂಹಲವಿದೆ. ಸಿನಿಮಾ ಬಜೆಟ್, ಸ್ಟಾರ್ ಕಾಸ್ಟ್,ಶೂಟಿಂಗ್, ಬಗ್ಗೆ ನಾನಾ ಸುದ್ದಿ ಪ್ರತಿದಿನ ಕೇಳಿ ಬರುತ್ತಿವೆ.. ಆದರೆ ಚಿತ್ರತಂಡ ಮಾತ್ರ ಯಾವುದಕ್ಕೂ ಪ್ರತಿಕ್ರಿಯಿಸುತ್ತಿಲ್ಲ ಈ ಬಗ್ಗೆ ಮೌನವಾಗಿಯೇ ಇದೆ. ಇನ್ನೇನು ಶೀಘ್ರದಲ್ಲೇ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳುವ ನಿರೀಕ್ಷೆ ಇದೆ.

ನಮಿತ್ ಮಲ್ಹೋತ್ರ ಜೊತೆ ಸೇರಿ ನಟ ಯಶ್ ರಾಮಾಯಣ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ… ಹಾಗೆಯೇ ಚಿತ್ರದಲ್ಲಿ ರಾವಣನ ಪಾತ್ರವನ್ನು ಕೂಡ ರಾಕಿಂಗ್ ಸ್ಟಾರ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು, ಶ್ರೀ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.. ಈಗಾಗಲೇ ಸದ್ದಿಲ್ಲದೆ ಸಿನಿಮಾ ಚಿತ್ರೀಕರಣ ಸಹ ನಡೆಯುತ್ತಿದೆ.. ಹನುಮಂತನಾಗಿ ಸನ್ನಿ ಡಿಯೋಲ್, ಕೈಕೆಯಿ ಆಗಿ ಲಾರದತ್ತ, ದಶರಥನಾಗಿ ಅರುಣ್ ಗೋವಿಲ್ ನಟಿಸುವ ಬಗ್ಗೆ ಕೇಳಿ ಬರುತ್ತಿದೆ.

ರಾಮಾಯಣ ಚಿತ್ರದಲ್ಲಿ ಲಂಕಾಸುರನ ಪಾತ್ರದಲ್ಲಿ ಯಶ್ ನಟಿಸುವ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ. ಆದರೆ ಯಶ್ ಕಾಸ್ಟಿಂಗ್ ಬಗ್ಗೆ ಕ್ರೇಜಿ ನ್ಯೂಸ್ ಒಂದು ವೈರಲ್ ಆಗುತ್ತಿದೆ.ರಾವಣನ ಗೆಟಪ್ ಗಾಗಿ ಎಷ್ಟು ನಿಜವಾದ ಚಿನ್ನ ಬಳಸಿ ಸಿದ್ಧಪಡಿಸಿದ ದೇಶಭೂಷಣದಲ್ಲಿ ಕಂಗೊಳಿಸುತ್ತಾರೆ ಎನ್ನಲಾಗುತ್ತಿದೆ. ಹಿಂದೂ ಪುರಾಣಗಳಲ್ಲಿ, ಲಂಕಾದ ಸುವರ್ಣ ನಗರವನ್ನು ಭಗವಾನ್ ವಿಶ್ವಕರ್ಮ ನಿರ್ಮಿಸಿದನೆಂದು ನಂಬಲಾಗಿದೆ. ಹಾಗಾಗಿ ಆ ಪಾತ್ರವನ್ನು ಮತ್ತೆ ತೆರೆ ಮೇಲೆ ತರಲು,ನಿಜವಾದ ಬಂಗಾರವನ್ನು ಬಳಸಲಾಗುತ್ತದೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

ಗಗನ್ ಅಗರ್ವಾಲ್ ಹಾಗೂ ದಿನೇಶ್ ಶರ್ಮ, ರಾಮಾಯಣ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ.. ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಇದೆ.. ಇನ್ನುಳಿದಂತೆ ಲಕ್ಷ್ಮಣನಾಗಿ ರವಿ ದುಬೆ,ಮಂಥರೆ ಆಗಿ ಶಿಬಾ ಚಡ್ಡ,ವಿಭೀಷಣ ಆಗಿ ವಿಜಯ್ ಸೇತುಪತಿ, ಕೌಸಲ್ಯ ಆಗಿ ಇಂದಿರ ಕೃಷ್ಣ ನಟಿಸುತ್ತಿದ್ದಾರೆ ಎನ್ನಲಾಗುತ್ತದೆ..
ಇನ್ನು ರಾವಣನ ಪಾತ್ರದಲ್ಲಿ ಯಶ್ ಆರ್ಭಟ ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.ಈಗಾಗಲೇ ಲಂಕಾಸುರನ ಗೆಟಪ್ ನಲ್ಲಿ ಯಶ್ ನ ಎ.ಐ ಪೋಸ್ಟರ್ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.. ಯಶ್ ಈ ಚಿತ್ರದಲ್ಲಿ ಮತ್ತಷ್ಟು ಖಡಕ್ ಲುಕ್ ನಲ್ಲಿ ಕಾಣಿಸಿಕೊಳ್ಳಲು ದೇಹವನ್ನು ಮತ್ತಷ್ಟು ಹುರಿಗೊಳಿಸುತ್ತಿದ್ದಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶ್ ಗೆ ಹೆಸರು ತಂದುಕೊಟ್ಟ KGF ಸಿನೆಮಾ,ಬಂಗಾರದ ಸುತ್ತಲೇ ಸುತ್ತಿತ್ತು.. ಚಿತ್ರದಲ್ಲಿ ನಕಲಿ ಚಿನ್ನದ ಬಿಸ್ಕೆಟ್ ಗಳನ್ನು ಬಳಸಲಾಗಿತ್ತು.. ಆದರೆ ಈಗ ರಾಮಾಯಣ ಚಿತ್ರದಲ್ಲಿ ಅಸಲಿ ಚಿನ್ನವನ್ನೇ ಬಳಸಿ ಚಿತ್ರೀಕರಣ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಭಾರಿ ಕುತೂಹಲ ಮೂಡಿಸಿದೆ.. ಅಂದಾಜು 835 ಕೋಟಿ ರೂ ಬಜೆಟ್ ನಲ್ಲಿ ರಾಮಾಯಣ ಚಿತ್ರ ನಿರ್ಮಾಣವಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.. ಯಶ್ ಅರ್ಧ ಬಂಡವಾಳ ಹಾಕಲು ಮುಂದಾಗಿದ್ದಾರೆ ಎನ್ನುವ ಊಹಪೋಹ ಕೂಡ ಇದೆ. ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸಗಳು ಹೆಚ್ಚಾಗಿ ಇರುವುದರಿಂದ ಸಿನಿಮಾ ಬಿಡುಗಡೆ ತಡವಾಗುವ ಸಾಧ್ಯತೆ ಇದೆ.

ಮತ್ತೊಂದು ಕಡೆ ಎಷ್ಟು ಟಾಕ್ಸಿಕ್ ಚಿತ್ರವನ್ನು ಕೂಡ ನಿರ್ಮಿಸಿ, ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮುಂದಿನ ವರ್ಷ ಏಪ್ರಿಲ್ 10 ಕೆ ಸಿನಿಮಾ ಬಿಡುಗಡೆ ಆಗಲಿದೆ.ಈ ಸಿನಿಮಾ ಸಹ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.

Comments (0)

Your email address will not be published. Required fields are marked *

Back to top button