ರಾಜ್ಯವೈರಲ್ ನ್ಯೂಸ್ಸುದ್ದಿ
‘ಆಟೋ ರಿಕ್ಷಾ’ ಮೇಲೆ ಹುಲ್ಲು ಬೆಳೆಸಿದ ಚಾಲಕ: ಜನರು ಫಿದಾ

ತೆಲಂಗಾಣ: ಪ್ರಸಕ್ತ ಬೇಸಿಗೆಯಲ್ಲಿ ಬಿಸಿಲಿನ ಶಾಖಕ್ಕೆ ನಲುಗದ ರಾಜ್ಯಗಳು, ಹಳ್ಳಿಗಳೇ ಇಲ್ಲ. ಇದೇ ರೀತಿ ತೆಲಂಗಾಣದಲ್ಲಿ ಆಟೋ ಚಾಲಕನೊಬ್ಬ ಅಧಿಕ ತಾಪಮಾನದ ಝಳಕ್ಕೆ ತಪ್ಪಿಸಿಕೊಳ್ಳಲು ಕಂಡುಕೊಂಡ ಐಡಿಯಾ ನೆಟ್ಟಿಗರು ಫೀದಾ ಆಗಿದ್ದಾರೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಈ ವರ್ಷದ ಫೆಬ್ರವರಿಯಿಂದ ಈ ವರೆಗೆ ತೀವ್ರ ತಾಪಮಾನ ದಾಖಲಾತಿಯಿಂದ ಜನರು ಹೈರಾಣಾಗಿದ್ದರು. ಇದಕ್ಕೆ ವಾಹನ ಸವಾರರು ಹೊರತಾಗಿಲ್ಲ. ಬಿಸಿಲ ಝಳಕ್ಕೆ ಬೇಸತ್ತ ಆಟೋ ತೆಲಂಗಾಣದಲ್ಲಿ ಆಟೋ ಚಾಲಕರೊಬ್ಬರು ತಮ್ಮ ಆಟೋ ರಿಕ್ಷಾ ಮೇಲೆ ಹುಲ್ಲು ಬೆಳೆಸುವ ಮೂಲಕ ಕೂಲ್ ಸಂಚಾರ ಮಾಡುತ್ತಿದ್ದಾರೆ.
ಅಚ್ಚರಿ ಅನಿಸಿದರೂ ಇದು ಸತ್ಯ. ಆಟೋ ಮೇಲೆ ಹುಲ್ಲು ಬೆಳೆಸಿ, ಅದಕ್ಕೆ ನೀರು ಹಾಕುವ ಮೂಲಕ ಆಟೋದ ಒಳಗೆ ತಣ್ಣನೆಯ ವಾತಾವರಣ ಕಾಪಾಡಿಕೊಂಡಿದ್ದಾರೆ ಈ ಚಾಲಕ.





