ಜಿಲ್ಲೆಸುದ್ದಿ

ಕೆರೆಗೆ ಈಜಲು ಬಂದ ವ್ಯಕ್ತಿ ಸಾವು

ಚಿಕ್ಕಮಗಳೂರು :- ಕೆರೆಗೆ ಈಜಲು ಬಂದ ವಕ್ತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಗೋಣಿಬಿಡಿನಲ್ಲಿ ಜರುಗಿದೆ.

ಶಿರಸಿಯಿಂದ 15 ಜನರ ಗುಂಪು ಬಂದಿದ್ದು, ವೀಕೆಂಡ್ ಹಿನ್ನಲೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಶಿರಸಿ ಗುಂಪಿನ ಜನರು ಬಂದಿದ್ದರು. ಮೂಡಿಗೆರೆ ತಾಲ್ಲೂಕಿನ ಗೋಣಿಬಿಡಿನ ಕೆರೆಯಲ್ಲಿ ಈಜಲು ಶಿರಸಿ ಫ್ರೆಂಡ್ಸ್ ಹೋಗಿದ್ದರು.

 

ಕೆರೆಯಲ್ಲಿ ಈಜುವ ಸಂದರ್ಭದಲ್ಲಿ ಆಕಾಶ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಈಶ್ವರ್ ಮಲ್ಪೆ ಹಾಗೂ ಆರಿಫ್ ತಂಡದಿಂದ ರಕ್ಷಣೆ ಮಾಡಲಾಗಿದ್ದು, ಆಂಬುಲೆನ್ಸ್ ಡ್ರೈವರ್ ಸಂತೋಷ್ ಮತ್ತು ಚಂದ್ರು ಅವರಿಂದಲೂ ರಕ್ಷಣೆ ಮಾಡಲಾಗಿದೆ.

Comments (0)

Your email address will not be published. Required fields are marked *

Back to top button