
ತುಮಕೂರು : ಸೋಮಣ್ಣ ಪ್ರಚಾರದ ವೇಳೆ ಜೆಡಿಎಸ್ನ ಎರಡು ಬಣಗಳ ನಡುವೆ ಬಡಿದಾಟ ನಡೆದಿರುವಂತಹ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೊಣವಿನಕೆರೆಯಲ್ಲಿ ನಡೆದಿದೆ.
ಜೆಡಿಎಸ್ ಮುಖಂಡ ರಾಕೇಶ್ ಗೌಡ ನೇತೃತ್ವದ ಗುಂಪು ಮುಖಂಡ ಕೆ. ಟಿ ಶಾಂತಕುಮಾರ್ ನೇತೃತ್ವದ ಪ್ರಚಾರ ಅಡ್ಡಿಯಾದ ಹಿನ್ನೆಲೆಯಲ್ಲಿ ರಾಕೇಶ್ ಗೌಡ – ಕೆ. ಟಿ. ಶಾಂತಕುಮಾರ್ ಗುಂಪು ನಡುವೆ ಸಭೆ ವಾಗ್ವಾದ ಉಂಟಾಗಿ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ.
ಮಾಜಿ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಹಾಗೂ ಅಭ್ಯಾರ್ಥಿ ವಿ. ಸೋಮಣ್ಣ ಮಧ್ಯೆ ಪ್ರವೇಶಿಸಿ ಗಲಾಟೆಯನ್ನು ನಿಲ್ಲಿಸಿದ್ದಾರೆ. ಕೆಲ ಕಾಲ ಬಿಗುವಿನ ವಾತಾವರಣದ ಬಳಿಕ ಗೊಂದಲ ಶಮನವಾಗಿ ಪ್ರಚಾರ ಮುಂದುವರೆದಿದೆ. ಜೆಡಿಎಸ್ ಗುಂಪುಗಳ ನಡುವಿನ ರಾಜಕೀಯ ಬಣ ಬೂದಿ ಮುಚ್ಚಿದ ಕೆಂಡದಂತಾಗಿದೆ




