
ಹುಬ್ಬಳ್ಳಿ : ಚೆನ್ನಗಿರಿಯಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ಕಾರನ್ನು ತಪಾಸಣೆ ಮಾಡುವ ವೇಳೆ ಸರಿಯಾದ ದಾಖಲೆ ಇಲ್ಲದ 80 ಸಾವಿರ ಹಣವನ್ನು ವಶಕ್ಕೆ ಪಡೆಯುವಲ್ಲಿ ಹುಬ್ಬಳ್ಳಿಯ ಗಬ್ಬೂರ್ ಚೆಕ್ ಪೋಸ್ಟ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ವಾಹನ ತಪಾಸಣೆ ಮಾಡುತ್ತಿದ್ದ ಸಮಯದಲ್ಲಿ ಚನ್ನಗಿರಿಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ವಾಹನ ಸಂಖ್ಯೆ ಕೆ.ಎ.17 ಪಿ 7784 ಮಾರುತಿ ಸುಜೂಕಿ ಸೆಲೆರಿಯೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚನ್ನಗಿರಿಯ ಪೂರ್ಣಿಮಾ ಎಸ್ ಅವರ ಹತ್ತಿರವಿದ್ದ ಬ್ಯಾಗ್ನಲ್ಲಿ 80 ಸಾವಿರ ರೂ ಹಣ ಇರುವುದು ಕಂಡು ಬಂದಿದೆ.
ಈ ಹಣಕ್ಕೆ ಯಾವುದೇ ದಾಖಲೆ ತೋರಿಸದೆ ಇರುವುದರಿಂದ ನಗದನ್ನು ಚುನಾವಣಾ ತಪಾಸಣಾ ಅಧಿಕಾರಿಗಳು ವಶಕ್ಕೆ ಪಡೆದು, ಹಣವನ್ನು ಖಜಾನೆ ಇಲಾಖೆ ಹುಬ್ಬಳ್ಳಿಯಲ್ಲಿ ಜಮೆ ಮಾಡಿದ್ದಾರೆ. ಮುಂದಿನ ವಿಚಾರಣೆಗೆ ಕ್ಯಾಶ್ ಸೀಜರ್ ಕಮೀಟಿಗೆ ಹಾಜರು ಪಡಿಸಲಾಗಿದೆ.
ಎಮ್. ಜಿ. ಜೋರಮ್ಮನವರ ಮ್ಯಾಜಿಸ್ಟ್ರೇಟ್ ಎಸ್.ಎಸ್.ಟಿ-1 ಇವರ ನೇತೃತ್ವದ ತಂಡ ಕಾರ್ಯನಿರ್ವಹಿಸುತ್ತಿತ್ತು ಎಂದು 72- ಹುಬ್ಬಳ್ಳಿ-ಧಾರವಾಡ ಪೂರ್ವ (ಪ.ಜಾ) ವಿಧಾನ ಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




