
ಹುಬ್ಬಳ್ಳಿ : ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಇಬ್ಬರು ಬಿಜೆಪಿ ನಾಯಕರು ದೆಹಲಿಗೆ ಪ್ರಯಾಣ ಬೆಳೆಸಿದ್ದು, ತೀವ್ರ ಕುತೂಹಲ ಮೂಡಿಸಿದೆ. ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿರುವ ಇಬ್ಬರು ನಾಯಕರು ಭೇಟಿ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ.

ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಸಂಸದ ಅನಂತಕುಮಾರ ಹೆಗಡೆ ಅವರು, ಡಿ.17 ರಾತ್ರಿ 8.30ಕ್ಕೆ ಒಂದೇ ವಿಮಾನದಲ್ಲಿ ಇಬ್ಬರು ನಾಯಕರು ಪ್ರಯಾಣ ಬೆಳೆಸಿದ್ದಾರೆ. ಸ್ವಪಕ್ಷದವರೊಂದಿಗೆ ಆಡಳಿತ ಪಕ್ಷಕ್ಕೂ ಹೇಳಿಕೆ ನೀಡುತ್ತಾ ಬಂದಿರೋ ಯತ್ನಾಳ್, ಈ ಹಿಂದಿನಿಂದಲೂ ಹಿಂದೂ ಪರ ಹೇಳಿಕೆ ನೀಡುತ್ತಾ ಬಂದಿರೋ ಸಂಸದ ಹೆಗಡೆ ಅವರು, ಹೈಕಮಾಂಡ ಬುಲಾವ್ ಹಿನ್ನೆಲೆ ದೆಹಲಿಗೆ ಪ್ರಯಾಣ ಬೆಳೆಸಿದ್ರಾ..? ಎಂಬುವುದು ಕುತೂಹಲ ಮೂಡಿಸಿದೆ.




