ರಾಜಕೀಯರಾಜ್ಯಸುದ್ದಿ

ಜೋಶಿಯವರಿಂದ ಲಿಂಗಾಯತರಿಗೆ ಅನ್ಯಾಯವಾಗಿಲ್ಲ- ಮಹೇಶ್​ ಟೆಂಗಿನಕಾಯಿ.

ಹುಬ್ಬಳ್ಳಿ: ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿಯವರಿಂದ ಲಿಂಗಾಯತರಿಗೆ ಅನ್ಯಾಯವಾಗಿಲ್ಲ ಎಂದು ಹೇಳುವ‌ ಮೂಲಕ ಶಾಸಕ ಮಹೇಶ್​ ಟೆಂಗಿನಕಾಯಿ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪರ ಬ್ಯಾಟ್ ಬೀಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೋಶಿಯವರಿಂದ ಯಾವುದೇ ರೀತಿಯಾಗಿ ಅನ್ಯಾಯ ಆಗಿಲ್ಲ. ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳಿಗೆ ತಪ್ಪು ಗ್ರಹಿಕೆಯಾಗಿದೆ. ಹೀಗಾಗಿ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ತಪ್ಪು ಮಾಹಿತಿ ಇದೆ. ಲಿಂಗಾಯತ ನಾಯಕರಿಗೆ ಒಂದು ವೇಳೆ ಅಗತ್ಯವಿದ್ದರೇ ದಿಂಗಾಲೇಶ್ವರ ಶ್ರೀಗಳೊಂದಿಗೆ ಮಾತನಾಡುವೆ ಎಂದರು.

ಕಾಂಗ್ರೆಸ್ ನಾಯಕರಿಗೆ ಆದಾಗ ತೆರಿಗೆ ಅಧಿಕಾರಿಗಳಿಂದ ನೋಟೀಸ್ ಜಾರಿ ವಿಚಾರವಾಗಿ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ ಸ್ವತಂತ್ರವಾಗಿದ್ದು, ಯಾವುದೇ ರೀತಿಯ ಬಿಜೆಪಿ ನಾಯಕರ ಹಸ್ತಕ್ಷೇಪ ಇಲ್ಲ. ದಾವಣಗೆರೆ ಸಂಸದ ಸಿದ್ದೇಶ್ವರ ಮೇಲೆಯೂ ಸಹ ಐಟಿ ದಾಳಿ ಆಗಿದೆ. ಅವಾಗ ಅದರಲ್ಲಿ ಯಾರ ಕೈವಾಡವಿತ್ತು ಎಂದು ಪ್ರಶ್ನೆ ಮಾಡಿದರು.

Comments (0)

Your email address will not be published. Required fields are marked *

Back to top button