ಜಿಲ್ಲೆರಾಜಕೀಯರಾಜ್ಯ

ಜಗದೀಶ್ ಶೆಟ್ಟರ್ ಕೂಡ​ ಆಕಾಂಕ್ಷಿ : ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ : ಜಗದೀಶ್ ಶೆಟ್ಟರ್​ಗೆ ಎಂಪಿ ಟಿಕೆಟ್ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಶೆಟ್ಟರ್ ಅವರ ಅಭಿಪ್ರಾಯ ಕೇಳ್ತಾ ಇದ್ದೀವಿ. ಅವರನ್ನು ಕೂಡ ಆಕಾಂಕ್ಷಿ ಅಂತ ಅಂದುಕೊಂಡಿದ್ದೀವಿ. ನಮ್ಮ ಶಾಸಕರು, ಕಾರ್ಯಕರ್ತರು ಯಾರಿಗೆ ಹೇಳ್ತಾರೆ ಅವರಿಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿದರು.

 ಪ್ರತಿ ಜಿಲ್ಲೆಯಲ್ಲೂ ಕೂಡ ಒಬ್ಬೊಬ್ಬ ಸಚಿವರನ್ನು ವೀಕ್ಷರನ್ನು ನೇಮಕ ಮಾಡಿದ್ದೇವೆ. ಅವರು ಅಭಿಪ್ರಾಯ ಕಲೆಕ್ಟ್ ಮಾಡ್ತಾ ಇದ್ದಾರೆ. ಅಭಿಪ್ರಾಯ ಕಲೆಕ್ಟ್ ಮಾಡಿ ಪೈನಲ್ ಮಾಡಿಕೊಡಿ ಅಂತ ಹೇಳಿದ್ದೇವೆ. ಅವರಲ್ಲಿ ಯಾರೋ ಸೂಕ್ತ ಆಗ್ತಾರೆ ಅಂತ ಅಭ್ಯರ್ಥಿನಾ ಆಯ್ಕೆ ಮಾಡುತ್ತೇವೆ ಎಂದರು.

ಅಲ್ಪಸಂಖ್ಯಾತ ಮೂರು ಟಿಕೆಟ್ ಬೇಡಿಕೆ ವಿಚಾರ

 ಇನ್ನೂ ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು ನಾವು ಹಿಂದೇನು ಕೂಡ ಎರಡು ಕೊಟ್ಟಿದ್ದೇವೆ ಈಗಲೂ ಕೂಡ ಕೊಡ್ತೇವೆ. ಬಿಜೆಪಿಯವರು ಏನ್ ಮಾಡ್ತಾರೆ ಅವರು ಅಲ್ಪಸಂಖ್ಯಾತರ  ವೋಟ್ ಬೇಡ ಅಂತಾರೆ. ಅಲ್ಪಸಂಖ್ಯಾತರು ಭಾರತೀಯ ನಾಗರಿಕರಲ್ಲವೇ..? ಇದಕ್ಕೆ ಅವರು ಉತ್ತರ ಹೇಳುತ್ತಾರಾ..? ಯತ್ನಾಳ್ ಗಡ್ಡ ಬಿಟ್ಟವರು ಬುರುಕ ಹಾಕಿದವರು ಬರಬೇಡಿ ನಾನು ಭೇಟಿ ಮಾಡಲ್ಲ ಅಂತಾರೆ. ಅವರದು ಬಹುತ್ವದ ಪಕ್ಷನಾ ನಮ್ಮ ದೇಶ ಬಹುತ್ವ ಸಂಸ್ಕೃತಿ ಇರುವ ದೇಶ. ಈ ದೇಶದಲ್ಲಿರುವಂತವರೆಲ್ಲರನ್ನ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಯೋತ್ಪಾದಕನ ನಂಟಿರುವನ ಜೊತೆ ಸಿಎಂ ವೇದಿಕೆ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು ನರೇಂದ್ರ ಮೋದಿ, ಗಡ್ಕರಿ ಅವರ ಜೊತೆಯಲ್ಲೇ ಇದ್ದರೂ ಅವರು. ಇವರು ಬಿಸಿನೆಸ್ ಮಾಡುತ್ತಿದ್ದರಂತೆ. ಕಳೆದ ಚುನಾವಣೆಯಲ್ಲಿ ಅವರನ್ನು ಸೋಲಿಸಲಿಕ್ಕೆ ತನ್ವಿರ್ ಬಹಳಷ್ಟು ಪ್ರಯತ್ನಪಟ್ಟಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ರು ಆ ದ್ವೇಷಕ್ಕೆ ಹೀಗೆ ಮಾಡಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಹೇಳಿದರು.

Comments (0)

Your email address will not be published. Required fields are marked *

Back to top button