ರಾಜ್ಯಸುದ್ದಿ

ಬಿಜೆಪಿ ಕಚೇರಿ ಗ್ಲಾಸ್ ಪೀಸ್ ಪೀಸ್..!

ಚಿತ್ರದುರ್ಗ : ಬಿಜೆಪಿಯಲ್ಲಿ ಒಂದೆಡೆ ನಾಯಕರು ಸಿಡಿದು ಬೀಳ್ತಾ ಇದ್ರೆ, ಮತ್ತೊಂದೆಡೆ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ.ಸ್ಥಳೀಯರಿಗೆ ಲೋಕಸಭಾ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಚಿತ್ರದುರ್ಗದಲ್ಲಿ
ಬಿಜೆಪಿ ಕಛೇರಿ ಗಾಜು ಪುಡಿ ಪುಡಿ ಮಾಡಿದ್ದಾರೆ. ಹೊಳಲ್ಕೆರೆ ಶಾಸಕ ಚಂದ್ರಪ್ಪ ತಮ್ಮ ಬೆಂಬಲಿಗರ ಮೂಲಕ ಪುತ್ರನಿಗೆ ಟಿಕೆಟ್ ದೊರಕಿಸಿಕೊಡಲು ಮಾಡಿದ ತಂತ್ರ ಇದು ಎನ್ನಲಾಗುತ್ತಿದೆ.


ವರಿಷ್ಠರ ಮೇಲೆ ಒತ್ತಡ ಹಾಕಲು ಚಿತ್ರದುರ್ಗ ನಗರದ ಕೆಳಗೋಟೆ ಬಡಾವಣೆ ಯಲ್ಲಿನ ಪಕ್ಷದ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರೊಂದಿಗೆ ಹಾಗೂ ಜಿಲ್ಲಾಧ್ಯಕ್ಷ ಮುರುಳಿಯೊಂದಿಗೆ ಮಾತಿನ ಚಕಮಕಿ ನಡೀತು . ಈ ವೇಳೆ ಕೆಲ ಕಾರ್ಯಕರ್ತರಿ ಕಚೇರಿ ಗಾಜು ಒಡೆದು, ಪೀಠೋಪಕರಣ ಧ್ವಂಸಗೊಳಿಸಿದ್ರು. ಜಿಲ್ಲಾಧ್ಯಕ್ಷ ಮುರುಳಿ‌ ಕಾರ್ಯಕರ್ತರನ್ನು ಸಮಾಧಾನಪಡಿಸಿ ವರಿಷ್ಠರ ಗಮನಕ್ಕೆ‌ ವಿಷಯವನ್ನು ತರುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ಸು ಪಡೆದ್ರು.

Comments (0)

Your email address will not be published. Required fields are marked *

Back to top button