ರಾಜ್ಯಸುದ್ದಿ

ರಾಷ್ಟ್ರೀಯ ಪಕ್ಷಗಳಿಗೆ ಇಮ್ಮಡಿ‌ ಸಿದ್ದರಾಮೇಶ್ವರ ಸ್ವಾಮೀಜಿ ಎಚ್ಚರಿಕೆ

ಸಾಮಾಜಿಕ ನ್ಯಾಯವೆಂಬುದು ಎರಡು ಸಮುದಾಯಗಳಿಗೆ ಮಾತ್ರ ಸೀಮಿತವಾಗಿದೆಯೇ? ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಶ್ನೆ ಮಾಡಿದರು.ಪರಿಶಿಷ್ಟ ಜಾತಿಯ ಐದು ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಚಿತ್ರದುರ್ಗ-ಕೋಲಾರದಲ್ಲಿ ಭೋವಿ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಲು ಅಗ್ರಹಿಸಿದರು.

ಕಾಂಗ್ರೆಸ್ ಘೋಷಿಸಿದ ಅಭ್ಯರ್ಥಿಗಳನ್ನು ಬದಲಾಯಿಸಲು ಪಟ್ಟು ಹಿಡಿದಿದ್ದು, ಭಾಜಪದಿಂದ ಚಿತ್ರದುರ್ಗದಲ್ಲಿ ಅವಕಾಶ ನೀಡಬೇಕಾಗಿ ಶ್ರೀಗಳು ಆಗ್ರಹಿಸಿದರು. ರಾಷ್ಟ್ರೀಯ ಪಕ್ಷಗಳು ಅವಕಾಶ ನೀಡದಿದ್ದರೆ ರಾಜ್ಯಮಟ್ಟದ ಜನಪ್ರತಿನಿಧಿಗಳ ಹಾಗೂ ಪ್ರಮುಖರ ಸಭೆ ಕರೆದು ಮುಂದಿನ ನಡೆ ಪ್ರಕಟಿಸಲಾಗುವುದು ಎಂದರು.

Comments (0)

Your email address will not be published. Required fields are marked *

Back to top button