ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯವರ ಜೆರ್ಸಿ ನಂಬರ್ 7 ಇನ್ನೂ ಮುಂದೆ ಯಾವ ಆಟಗಾರರಿಗೆ ಸಿಗುವುದಿಲ್ಲ. ಈ ಸಂಖ್ಯೆಯ ಜೆರ್ಸಿಯನ್ನು ಬಿಸಿಸಿಐ ನಿವೃತ್ತಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಕ್ರೀಡೆಗೆ ಅಪಾರವಾದ ಕೊಡುಗೆ ಸಲ್ಲಿಸಿದ್ದ ಎಂಎಸ್ ಧೋನಿ ಕ್ರಿಕೆಟ್ ಲೋಕದಲ್ಲಿ ಮರೆಲಾಗದಂತಹ ದಂತಕಥೆಗಳನ್ನ ಬಿಟ್ಟು ಹೋಗಿದ್ದಾರೆ. ಎಂಎಸ್ ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಹಾಗೂ ಚುಟುಕು ವಿಶ್ವಕಪ್ ಗರಿಯನ್ನ ಭಾರತಕ್ಕೆ ತಂದುಕೊಟ್ಟಿದ್ದಾರೆ. ಇವರ ನಾಯಕತ್ವಕ್ಕೆ ಪ್ರಪಂಚದಾದ್ಯಂತ ಅಪಾರವಾದ ಉತ್ತಮ ಪ್ರಸಂಶೆಗಳು ಬಂದಿದ್ದವು. ಧೋನಿಯವರಿಗೆ ಗೌರವ ನೀಡುವ ಉದ್ದೇಶದಿಂದ ಅಂತಹ ಮಹಾನ್ ನಾಯಕ ಧರಿಸುತ್ತಿದ್ದ ಜೆರ್ಸಿ ನಂಬರ್ 7 ಅನ್ನು ನಿವೃತ್ತಿಗೆ ಸೇರಿಸಲು ಬಿಸಿಸಿಐ ನಿರ್ಧರಿಸಿದೆ.
2020 ಆಗಸ್ಟ್ 15 ರಂದು ಕೂಲ್ ಕ್ಯಾಪ್ಟನ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬಾಯ್ ಹೇಳಿದ್ದರು. ಅದಾದ ಬಳಿಕ ಕಳೆದ ಮೂರು ವರ್ಷಗಳಿಂದಲೂ ಐಪಿಎಲ್ ನಲ್ಲಿ ಸಕ್ರಿಯವಾಗಿ ಚೆನೈ ಸೂಪರ್ ಕಿಂಗ್ಸ್ ತಂಡವನ್ನ ಮುನ್ನೆಡಸುತ್ತಿದ್ದಾರೆ.ಇದೇ ರೀತಿ ಕ್ರಿಕೆಟ್ ದಿಗ್ಗಜ ಲಿಟಲ್ ಮಾಸ್ಟರ್ ಸಚಿನ್ ತೆಂಡಲ್ಕೂರ್ ಧರಿಸಿದ್ದ 10 ನೇ ನಂಬರ್ ಜೆರ್ಸಿಯನ್ನು ಕೂಡ ಬಿಸಿಸಿಐ ಅಧಿಕೃತವಾಗಿ ನಿವೃತ್ತಿಗೊಳಿಸಿತ್ತು. ಅದರಂತೆ ಈದೀಗ ಧೋನೊ ಜೆರ್ಸಿ ಕೂಡ ನಿವೃತ್ತಿ ಅಂಚಿನಲ್ಲಿದೆ ಎಂಬುದಾಗಿ ತಿಳಿದುಬಂದಿದೆ.
ಒಮ್ಮೆ ಬಿಸಿಸಿಐ ನಿರ್ಧಾರ ಕೈಗೊಂಡ ನಂತರ ಈ ಸಂಖ್ಯೆಯ ಜೆರ್ಸಿಗಳು ಯಾವುದೇ ಆಟಗಾರರಿಗೆ ಸಿಗುವುದಿಲ್ಲ. ಬಿಸಿಸಿಐ ಈ ಸಂಬಂಧ ತೀರ್ಮಾನ ಕೈಗೊಳ್ಳಲಿದೆ ಎಂದು ವರದಿಯಲ್ಲಿ ತಿಳಿಸಿವೆ…