ರಾಜಕೀಯರಾಜ್ಯಸುದ್ದಿ

ವಿ. ಸೋಮಣ್ಣರಿಂದ ಮುಂದುವರೆದ ಟೆಂಪಲ್​ ರನ್​!

ತುಮಕೂರು :  ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣರಿಂದ ಮುಂದುವರಿದ ಟೆಂಪಲ್ ರನ್ ತುಮಕೂರು ಜಿಲ್ಲೆ ತಿಪಟೂರಿನ ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ, ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಸೋಮಣ್ಣ ಭೇಟಿ ನೀಡಿದ್ದಾರೆ.

ಕಾಡಸಿದ್ದೇಶ್ವರ ಮಠದ ಅಜ್ಜಯ್ಯನ ಆಶೀರ್ವಾದ ಪಡೆದು ನಂತರ ಆದಿಚುಂಚನಗಿರಿ ಶ್ರೀಗಳನ್ನೂ ಸಹ  ಭೇಟಿ ಮಾಡಿದರು. ಮತ್ತೊಂದೆಡೆ ಜೆಡಿಎಸ್ ಶಾಸಕರನ್ನು, ಮುಖಂಡರನ್ನು ಭೇಟಿ ಮಾಡುತ್ತಿದ್ದಾರೆ. ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ, ತಿಪಟೂರು ಕ್ಷೇತ್ರದ ಜೆಡಿಎಸ್ ಮುಖಂಡರನ್ನು ಭೇಟಿಯಾದ ಸೋಮಣ್ಣ ತುಮಕೂರಿನಲ್ಲಿ ಬಿಜೆಪಿ ಗೆಲ್ಲಲು ಕಸರತ್ತು ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button