#Exclusive Newsರಾಜಕೀಯರಾಜ್ಯಸುದ್ದಿ

ಸಂಸದ ಪ್ರತಾಪ್ ಸಿಂಹಗೆ ರಾಹುಕಾಲ ಶುರುವಾಗಿದ್ದು ಯಾವಾಗಿಂದ ಗೊತ್ತಾ ?

ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಕೈ ತಪ್ಪಲು ಕಾರಣವಾದ ರೋಚಕ ವಿಚಾರಗಳು ಈಗ ಬಹಿರಂಗವಾಗಿವೆ. ಟಿಕೆಟ್ ಕೈ ತಪ್ಪಲು `ರಾಹು’ವಿನಂತೆ ಕಾಡಿದ ಆ `ನಾಲ್ಕು’ ಅಂಶಗಳನ್ನು ಫ್ರೀಡಂ ಟಿವಿ ನಿಮ್ಮ ಮುಂದಿಡುತ್ತಿದೆ. ಇದು ರಾಷ್ಟ್ರ ರಾಜಕಾರಣದ ಪಡಸಾಲೆಯ ಎಕ್ಸ್ಕ್ಲ್ಯೂಸಿವ್ ಸ್ಫೋಟಕ ಸುದ್ದಿಯಾಗಿದ್ದು, ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಲು 4 ಅನೂಹ್ಯ ಕಾರಣಗಳು ಓದಿದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ.

ಸಿಂಹಗೆ ರಾಹು ಕಾಟ -1
ಪ್ರತಾಪ್ ಸಿಂಹ ವಿರುದ್ಧ ಮೋದಿ, ಅಮಿತ್ ಶಾಗೆ 14 ಪುಟಗಳ ರಹಸ್ಯ ಪತ್ರ ಬರೆಯಲಾಗಿತ್ತು. ಖುದ್ದು ಸಿಂಹ ಅತ್ಯಾಪ್ತರೇ ಈ ಪತ್ರ ಬರೆದಿದ್ರು. ಸಂಸದ ಸಿಂಹ ವೈಯಕ್ತಿಕ ಬದುಕಿನ ಬಗ್ಗೆ ಸುದೀರ್ಘ ಪತ್ರದಲ್ಲಿ ಉಲ್ಲೇಖ ಮಾಡಲಾಗಿತ್ತು. ದಾಖಲೆ ಸಮೇತ ಸಿಂಹ ವೈಯಕ್ತಿಕ ಬದುಕಿನ ವಿವರಗಳ ರವಾನೆ ಮಾಡಲಾಗಿತ್ತು. ದೆಹಲಿ, ಮೈಸೂರು ಮತ್ತು ಬೆಂಗಳೂರಿನ ಕೆಲ ವಿಚಾರಗಳ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಈ ಪತ್ರವನ್ನು ಬಿಜೆಪಿ ವರಿಷ್ಠರು, ಗಂಭೀರವಾಗಿ ಪರಿಗಣಿಸಿದ್ದರು. ತಾನೇ ಸಾಕಿದ ಗಿಣಿಯಿಂದ ಕುಕ್ಕಿಸಿಕೊಂಡ ಪ್ರತಾಪ ಸಿಂಹ, ಒಂದು ಕಡೆ ವೈರಿಗಳಿಂದ, ಮತ್ತೊಂದೆಡೆ ತನ್ನದೇ ಅತ್ಯಾಪ್ತರ ಪಿತೂರಿಗೆ ಬಲಿಪಶುವಾದರು.

ಸಿಂಹಗೆ ರಾಹು ಕಾಟ -2
ಪತ್ರ ಹೈಕಮಾಂಡ್ ಕೈ ಸೇರಿದ್ದ ಸಂದರ್ಭದಲ್ಲೇ, ಸಿಂಹ ಮೇಲೆ ದಿಢೀರ್ ಬಂದು ಬಿದ್ದಿತ್ತು ಹೊಗೆ ಬಾಂಬ್ .ಪ್ರತಾಪ್ ಸಿಂಹ ಪಾಸ್ ಪಡೆದು ಸಂಸತ್ಗೆ ಹೊಗೆ ಬಾಂಬ್ ದುಷ್ಟರು ನುಗ್ಗಿದ್ದರು. ಹೊಗೆ ಬಾಂಬ್ ಪ್ರಕರಣ ಬಿಜೆಪಿಯ ವರ್ಚಸ್ಸಿಗೆ ಬೆಂಕಿ ಇಟ್ಟಿತ್ತು. ಮುಜುಗರದಿಂದ ಪಾರಾಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿಗೆ ಸಿಂಹ ಸಿಲುಕಿದ್ದರು. ಆ ಕ್ಷಣದಲ್ಲೇ ಸಿಂಹಗೆ ಗಂಡಾಂತರ ಎದುರಾಗಿತ್ತು. ಇದೇ ಪ್ರಕರಣದ ತನಿಖೆ ಹೊತ್ತಲ್ಲಿ ಸಿಂಹ ಕೊರಳಿಗೆ ಮತ್ತೊಂದು ಉರುಳು ಸುತ್ತಿಕೊಂಡಿತು.

ಸಿಂಹಗೆ ರಾಹು ಕಾಟ -3
ಸಂಸತ್ ಮೇಲೆ ಹೊಗೆ ಬಾಂಬ್ ಕೇಸ್ನಲ್ಲಿ ತನಿಖೆ ನಡೆಸುತ್ತಿದ್ದ ಎನ್ ಐ ಎ, ಸಿಂಹ ಮೊಬೈಲ್ ವಶಕ್ಕೆ ಪಡೆದಿತ್ತು. ಆಗ ಸಿಂಹ ಮೊಬೈಲ್ನಲ್ಲಿ ಕೆಲವು ಮಹತ್ವದ ದಾಖಲೆಗಳು ಪತ್ತೆಯಾಗಿದ್ವು. ಈ ಎಲ್ಲಾ ಅಂಶಗಳು ವರಿಷ್ಠರ ಕೈ ಸೇರಿದ್ವು, ಸಿಂಹ ಮೊಬೈಲ್ನಲ್ಲಿದ್ದ ದಾಖಲೆಗಳು, ಸಿಂಹ ಅವರ ಕ್ಲೀನ್ ಇಮೇಜ್ಗೆ ಕಳಂಕ ತರುವಂತಿದ್ದವು. ಈ ಬಗ್ಗೆ ಹೈ ಕಮಾಂಡ್ ಬಹಳ ಗಂಭೀರವಾಗಿ ಆಲೋಚಿಸುವಂತೆ ಮಾಡಿತ್ತು.

ಸಿಂಹಗೆ ರಾಹು ಕಾಟ -4
ಹೊಗೆ ಬಾಂಬ್ ಪ್ರಕರಣ ಪ್ರತಾಪ್ ಸಿಂಹಗೆ ಮುಳುವಾಗಬಹುದು ಎಂಬ ಚರ್ಚೆ ನಡುವೆಯೇ ಸಿಂಹ ವಿರುದ್ಧ ವಿರೋಧಿಗಳು ಫುಲ್ ಆ್ಯಕ್ಟೀವ್ ಆಗಿದ್ರು. ವಿಜಯೇಂದ್ರ ಜೊತೆಗೆ ಟೆರಿಟರಿ ವಾರ್ ಸಿಂಹ ಹ್ಯಾಟ್ರಿಕ್ ಕನಸಿಗೆ ಕೊಳ್ಳಿ ಇಟ್ಟಿತ್ತು. 2018ರಲ್ಲಿ ವರುಣಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಹೋಗಿದ್ದ ವಿಜಯೇಂದ್ರಗೆ ಇದೇ ಪ್ರತಾಪ್ ಸಿಂಹ ಗ್ಯಾಂಗ್ ಅಡ್ಡಗೋಡೆ ಕಟ್ಟಿತ್ತು. ಇದು ನಮ್ಮ ಏರಿಯಾ, ನಮ್ಮ ಅಡ್ಡಾ ಎಂದು ಜಿದ್ದಿಗೆ ಬಿದ್ದವರಂತೆ ವರ್ತಿಸಿದ್ದ ಟೀಂ, ಮೈಸೂರಿಗೆ ಬಿವೈ ವಿಜಯೇಂದ್ರ ಬೇಡವೇ ಬೇಡ ಎಂದು ಸಂತೋಷ್ಜೀ ಕಿವಿ ಕಚ್ಚಿತ್ತು . ಈ ಸೇಡನ್ನು 5 ವರ್ಷ ಎದೆಯಲ್ಲಿಟ್ಟುಕೊಂಡು ಸಮಯ ಕಾಯುತ್ತಿದ್ದ ವಿಜಯೇಂದ್ರ ಟೀಂ ಇದೀಗ ಆಪರೇಷನ್ ಶುರು ಮಾಡಿತ್ತು. ಪ್ರತಾಪ್ ಸಿಂಹ ಅವರ ಎಲ್ಲಾ ವೀಕ್ನೆಸ್ ಪಾಯಿಂಟ್ಗಳನ್ನು ಹೈಕಮಾಂಡ್ಗೆ ತಲುಪಿಸಿದ್ದ ವಿಜಯೇಂದ್ರ ಟೀಂ, ಕ್ಷೇತ್ರದಲ್ಲಿ ಸಿಂಹಗೆ ಟಿಕೆಟ್ ನೀಡೋದು ಬೇಡ ಎಂಬ ವಾತಾವರಣ ಬಲಗೊಳ್ಳಲು ಕಾರಣವಾಗಿತ್ತು. ವರಿಷ್ಠರಿಗೆ ದೂರು ಕೊಟ್ಟು ಸಿಂಹ ಸೋಲು ಗ್ಯಾರಂಟಿ ಎಂದು ಹಬ್ಬಿಸಿದರು.
ಹೀಗೆ 14 ಪುಟಗಳ ಪತ್ರ, ಹೊಗೆ ಬಾಂಬ್, ಮೊಬೈಲ್ ರೆಕಾರ್ಡ್ಸ್ ಹಾಗೂ ವಿಜಯೇಂದ್ರ ಸೇಡು ಎಂಬ 4 ರಾಹು ಕಾಟಗಳಿಗೆ ಪ್ರತಾಪ ಸಿಂಹ ಬಲಿಪಶುವಾದ್ರು.

Comments (0)

Your email address will not be published. Required fields are marked *

Back to top button