Tuesday, February 10, 2026
19.8 C
Bengaluru
Google search engine
LIVE
ಮನೆರಾಜಕೀಯದ್ವೇಷ ಭಾಷಣ ಮಸೂದೆಯಡಿ ನೋಟಿಸ್ ನೀಡಿದ್ದು ತಪ್ಪು: ಪೊಲೀಸರ ನಡೆಗೆ ಸಚಿವ ಪರಮೇಶ್ವರ್ ಅತೃಪ್ತಿ

ದ್ವೇಷ ಭಾಷಣ ಮಸೂದೆಯಡಿ ನೋಟಿಸ್ ನೀಡಿದ್ದು ತಪ್ಪು: ಪೊಲೀಸರ ನಡೆಗೆ ಸಚಿವ ಪರಮೇಶ್ವರ್ ಅತೃಪ್ತಿ

ಬೆಂಗಳೂರು: ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಅವರಿಗೆ ‘ದ್ವೇಷ ಭಾಷಣ ಮಸೂದೆ-2025’ರ ಅಡಿಯಲ್ಲಿ ಪೊಲೀಸರು ನೋಟಿಸ್ ನೀಡಿರುವುದು ತಪ್ಪು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಮಸೂದೆಯು ಇನ್ನೂ ಕಾನೂನಾಗಿ ಜಾರಿಯಾಗದ ಹಿನ್ನೆಲೆಯಲ್ಲಿ ಈ ಕ್ರಮ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೋಟಿಸ್ ವಿವಾದದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ದ್ವೇಷ ಭಾಷಣ ತಡೆ ಮಸೂದೆಗೆ ಇನ್ನೂ ರಾಜ್ಯಪಾಲರ ಅಂಕಿತ ಬಿದ್ದಿಲ್ಲ. ಅದು ಇನ್ನೂ ಕಾಯ್ದೆಯಾಗಿ ಜಾರಿಗೆ ಬಂದಿಲ್ಲ. ಹೀಗಿರುವಾಗ ಆ ಮಸೂದೆಯನ್ನು ಉಲ್ಲೇಖಿಸಿ ನೋಟಿಸ್ ನೀಡಿರುವುದು ತಪ್ಪು.

ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ದ್ವೇಷ ಭಾಷಣ ತಡೆಯಲು ಹಲವು ಸೆಕ್ಷನ್‌ಗಳಿವೆ. ಪೊಲೀಸರು ಅವುಗಳ ಅಡಿಯಲ್ಲಿ ನೋಟಿಸ್ ನೀಡಬಹುದಿತ್ತು. ಅದನ್ನು ಬಿಟ್ಟು ಇನ್ನೂ ಜಾರಿಯಾಗದ ಮಸೂದೆಯನ್ನು ಬಳಸಿದ್ದು ಸರಿಯಲ್ಲ. ಪೊಲೀಸರು ಯಾವ ಉದ್ದೇಶದಿಂದ ಮತ್ತು ಯಾರ ಸೂಚನೆ ಮೇರೆಗೆ ಈ ರೀತಿ ಮಾಡಿದ್ದಾರೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತರಿಸಿಕೊಳ್ಳುವುದಾಗಿ ಸಚಿವರು ತಿಳಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments