ಜನಪ್ರಿಯ ಗಾಯಕ ಹಾಗೂ ಸಂಗೀತ ಸಂಯೋಜಕ ರಘು ದೀಕ್ಷಿತ್ ಅವರು ತಮ್ಮ ಜೀವನದ ಹೊಸ ಹಂತಕ್ಕೆ ಕಾಲಿಟ್ಟಿದ್ದಾರೆ. ಹಲವು ವರ್ಷಗಳಿಂದ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರಘು, ಇತ್ತೀಚೆಗೆ ಖ್ಯಾತ ಗಾಯಕಿ ವಾರಿಜಶ್ರೀ ಎಂಬ ಗಾಯಕಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ರಘು ಮತ್ತು ಆ ಗಾಯಕಿಯ ಪರಿಚಯ ಸಂಗೀತ ಕಾರ್ಯಕ್ರಮದ ವೇಳೆ ಆರಂಭವಾಗಿ, ನಂತರ ಸ್ನೇಹದಿಂದ ಪ್ರೀತಿ ಬೆಳೆಯಿತು ಎಂಬ ಮಾತು ಹರಿದಾಡುತ್ತಿದೆ. ಮದುವೆಯ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲದಿದ್ದರೂ, ಇಬ್ಬರ ಕುಟುಂಬಗಳು ಸಂಭ್ರಮದ ಸಿದ್ಧತೆಯಲ್ಲಿ ತೊಡಗಿಕೊಂಡಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ..
ರಘು ದೀಕ್ಷಿತ್ ಗೆ ಇದು ಎರಡನೇ ವಿವಾಹ ವಾಗಿದ್ದು, ಹಿಂದೆ ಶಾಸ್ತ್ರೀಯ ನೃತ್ಯಗಾರ್ತಿ ಮಯೂರಿ ಜೊತೆ ರಘು ಧೀಕ್ಷಿತ್ ವಿವಾಹ ಮುರಿದುಬಿದ್ದಿತ್ತು. ಇದೀಗ ಗ್ರ‍್ಯಾಮಿ-ನಾಮನಿರ್ದೇಶಿತ ಖ್ಯಾತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ಹೊಸ ಬಾಳಿನ ಬಂಡಿ ಹೂಡಲು ರಘು ದೀಕ್ಷಿತ್ ಸಿದ್ಧರಾಗಿದ್ದಾರೆ. ಇನ್ನು ರಘು ದೀಕ್ಷಿತ್ ಅಭಿಮಾನಿಗಳು ಮದುವೆಯ ಸುದ್ದಿಯಿಂದ ಸಂತೋಷಗೊಂಡಿದ್ದು, ನಮ್ಮ ಮೆಲೋಡಿ ಕಿಂಗ್‌ಗೆ ಹಾರ್ದಿಕ ಶುಭಾಶಯಗಳು ಎಂದು ಕಾಮೆಂಟ್ಗಳಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.


