ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ವರ್ಷಗಳೇ ಕಳೆಯುತ್ತಿವೆ.. ಅವರ ನೆನಪು ಮಾತ್ರ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿದಿದೆ.. ಅಪ್ಪು ಅಭಿಮಾನಿಗಳಿಗಾಗಿಯೇ, ಅವರ ನೆನಪನ್ನು ಶಾಶ್ವತವಾಗಿಸಲು, ಅವರ ಜೀವನದ ಪುಟಗಳನ್ನು ಜಗತ್ತಿಗೆ ತೆರೆದಿಡಲು ಪಿಆರ್‌ಕೆ ಆ್ಯಪ್ ಎಂಬ ಮೊಬೈಲ್ ಅಪ್ಲಿಕೇಶನ್ ಬರಲಿದೆ.
ಡಾ. ಪುನೀತ್ ರಾಜ್‌ಕುಮಾರ್ ಅವರ ನೆನಪುಗಳನ್ನು ಜೀವಂತವಾಗಿಡಲು, ಅವರ ಪತ್ನಿ ಆಶ್ವಿನಿ ಪುನೀತ್ ರಾಜ್‌ಕುಮಾರ್ ಅವರು PRK ಆ್ಯಪ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಈ ಆ್ಯಪ್‌ವು ಅಭಿಮಾನಿಗಳಿಗೆ ಅಪ್ಪು ಅವರ ಜೀವನ, ಚಿತ್ರಗಳು, ವಿಡಿಯೋಗಳು ಮತ್ತು ಇತರ ವಿಶೇಷ ವಿಷಯಗಳನ್ನು ತಿಳಿಯಲು ಅನುಕೂಲ ಮಾಡಿಕೊಡಲಿದೆ.. ಆ್ಯಪ್ ಅನ್ನು ಅಧಿಕೃತವಾಗಿ ಲಾಂಚ್ ಮಾಡಲು, ಆಶ್ವಿನಿ ಅವರು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಿದ್ದಾರೆ.ಇದೇ ಅಕ್ಟೋಬರ್ 29, ಪುನೀತ್ ರಾಜ್‌ಕುಮಾರ್ ಅವರ ನಾಲ್ಕನೇ ಪುಣ್ಯಸ್ಮರಣೆಯ ದಿನದಂದು ಈ ಆ್ಯಪ್ ಅನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು. ಆದರೆ, ಅದಕ್ಕೂ ಮುನ್ನ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲು ಒಂದು “ಪವರ್‌ಫುಲ್” ಗಿಫ್ಟ್ ಕಾದಿದೆ. ಇದೇ ಬರುವ ಶನಿವಾರ, ಬೆಳಗ್ಗೆ 11:55ಕ್ಕೆ ಈ ಆ್ಯಪ್‌ನ ಅಧಿಕೃತ ಟ್ರೈಲರ್ ಬಿಡುಗಡೆಯಾಗಲಿದೆ.


