Freedom TVTop News

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ: ಐವರ ಸ್ಥಿತಿ ಗಂಭೀರ

ಬೆಂಗಳೂರು:ಬೆಂಗಳೂರಿನಲ್ಲಿ ನಿಗೂಢ ಸ್ಪೋಟ ಸಂಭವಿಸಿದೆ. ಹೆಚ್ ಎ ಎಲ್ ಠಾಣಾ ವ್ಯಾಪ್ತಿಯ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ವಸ್ತು ಸ್ಫೋಟಗೊಂಡಿದ್ದು ಐವರಿಗೆ ಗಂಭೀರ ಗಾಯವಾಗಿದೆ. ಸ್ಫೋಟದ ತೀವ್ರತೆಗೆ ರಾಮೇಶ್ವರಂ ಕೆಫೆಗೆ ಹಾನಿ ಉಂಟಾಗಿದ್ದು, ಕೆಫೆಗೆ ಬಂದಿದ್ದ ವ್ಯಕ್ತಿಯ ಬ್ಯಾಗ್ ನಲ್ಲಿದ್ದ ಅನುಮಾನಸ್ಫದ ವಸ್ತು ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಇನ್ನು ಸ್ಥಳಕ್ಕೆ ಎಫ್ ಎಸ್ ಎಲ್ ತಂಡ ಆಗಮಿಸಿದ್ದು, ಘಟನೆ ಬಗ್ಗೆ ತನಿಖೆ ಆರಂಭಿಸಿದೆ. ಇನ್ನು ಸ್ಥಳದಲ್ಲಿ ಐಡಿ ಕಾರ್ಡುಗಳು ದೊರಕಿದ್ದು, ಪೊಲೀಸ್ರು ತನಿಖೆ ಚುರುಕುಗೊಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ, ಹೆಚ್ ಎ ಎಲ್ ಠಾಣೆ ಪೊಲೀಸ್ರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ತೀರಾ ಇತ್ತೀಚೆಗಷ್ಟೆ ಸದ್ದುಗುಂಟೆಪಾಳ್ಯ ವ್ಯಾಪ್ತಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿತ್ತು. ಇನ್ನು ಫರ್ಮ್ಯೂಮ್ ಫ್ಯಾಕ್ಟರಿ ಮತ್ತು ಊದುಬತ್ತಿ ಕಾರ್ಖನೆಯಲ್ಲೂ ಸ್ಫೋಟ ಸಂಭವಿಸಿತ್ತು. ಪಶ್ಚಿಮ ವಿಭಾಗದಲ್ಲೂ ಆಟೋರಿಕ್ಷಾ ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿ ದುರಂತ ಸಂಭವಿಸಿ ಸಾವು ನೋವಿಗೆ ಕಾರಣವಾಗಿತ್ತು.

Comments (0)

Your email address will not be published. Required fields are marked *

Back to top button