ರಾಜಕೀಯರಾಜ್ಯಸುದ್ದಿ

ಬೆಣ್ಣೆನಗರಿಯಲ್ಲಿ ಫೆಬ್ರವರಿ 3, 4 ರಂದು ಪತ್ರಕರ್ತರ 38 ನೇ ರಾಜ್ಯ ಸಮ್ಮೇಳನ

ದಾವಣಗೆರೆ: ಕಾರ್ಯನಿರತ ಪತ್ರಕರ್ತರ 38 ನೇ ರಾಜ್ಯ ಸಮ್ಮೇಳನಕ್ಕೆ ಬೆಣ್ಣೆ ನಗರಿ ದಾವಣಗೆರೆ ಸಜ್ಜಾಗುತ್ತಿದೆ. ಬರುವ ಫೆಬ್ರವರಿ 3 & 4 ರಂದು ನಗರದ ಶಾಮನೂರು ಶಿವಶಂಕ್ರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಸಮ್ಮೇಳನವನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

ಇನ್ನು 31 ವರ್ಷಗಳ ನಂತರ ನಡೆಯುತ್ತಿರುವ ಸಮ್ಮೇಳನದ ಅಧ್ಯಕ್ಷತೆಯನ್ನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ವಹಿಸಲಿದ್ದಾರೆ. ಶನಿವಾರ ಮತ್ತು ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳನ್ನ ನಡೆಸಲಿದ್ದಾರೆ. ಈ ಐತಿಹಾಸಿಕ ಸಮ್ಮೇಳನಕ್ಕೆ ರಾಜ್ಯದ ನಾಲ್ಕೂ ದಿಕ್ಕುಗಳಿಂದ ಸುಮಾರು ಮೂರ್ನಾಲ್ಕು ಸಾವಿರ ಪತ್ರಕರ್ತರು ಸೇರುವ ನಿರೀಕ್ಷೆ ಇದೆ. ಇನ್ನು ಕಾರ್ಯಕ್ರಮದಲ್ಲಿ ಸುಮಾರು ನಲವತ್ತು ಹಿರಿಯ ಪತ್ರಕರ್ತರಿಗೆ ಸಿಎಂ ಸನ್ಮಾನಿಸಲಿದ್ದಾರೆ. ಒಟ್ಟಾರೆ ಪತ್ರಕರ್ತರ ಸಮ್ಮೇಳನಕ್ಕೆ ದಾವಣಗೆರೆ ಸಿದ್ದವಾಗುತ್ತಿದ್ದು ಎಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಚಿವ ಮಲ್ಲಿಕಾರ್ಜುನ್ ಹೇಳಿದರು ಇಂದು ಸಂಜೆ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಲ್ಲಿಕಾರ್ಜುನ್ ಹೊರ ಜಿಲ್ಲೆಗಳಿಂದ ಬರುವ ಪತೃಕರ್ತರಿಗೆ ಊಟ ವ್ಯವಸ್ಥೆ ಇಂದ ಹಿಡಿದು ಇಡೀ ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ ಇದಕ್ಕೆ ಎಲ್ಲಾ ಪತ್ರಕರ್ತರು ಸಾಥ್ ನೀಡಬೇಕು ಎಂದರು.

Comments (0)

Your email address will not be published. Required fields are marked *

Back to top button