ಆರೋಗ್ಯಜಿಲ್ಲೆ

ಆರೋಗ್ಯ ಇಲಾಖೆಯಿಂದ ರಾಜ್ಯಾದ್ಯಂತ 262 ಹೊಸ ಆ್ಯಂಬುಲೆನ್ಸ್​ ಸೇವೆ

ಬೆಂಗಳೂರು : ಆರೋಗ್ಯ ಇಲಾಖೆಯಿಂದ ಗುರುವಾರ ಒಟ್ಟು 262 ಹೊಸ ಆ್ಯಂಬುಲೆನ್ಸ್ ವಾಹನಗಳ ಲೋಕಾರ್ಪಣೆ ಮಾಡಲಾಯಿತು. ವಿಧಾನಸೌಧದ ಮುಂಭಾಗದಲ್ಲಿ ಹೊಸ ಆ್ಯಂಬುಲೆನ್ಸ್ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ರಾಜ್ಯದ ಆರೋಗ್ಯ ಇಲಾಖೆಯ 108 ಆ್ಯಂಬುಲೆನ್ಸ್​ ಆರೋಗ್ಯ ಸೇವೆ ಬಲಪಡಿಸಲು 82.02 ಕೋಟಿ ರೂ. ವೆಚ್ಚದ 262 ಹೊಸ 108 ಆಂಬ್ಯುಲೆನ್ಸ್‌ಗಳಿಗೆ ಸಿಎಂ ನೂತನ ಆ್ಯಂಬುಲೆನ್ಸ್‌ಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಶಾಸಕ ರಿಜ್ವಾನ್ ಅರ್ಷದ್, ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಭಾಗಿಯಾಗಿದ್ದರು.

Comments (0)

Your email address will not be published. Required fields are marked *

Back to top button