MYSOREಜಿಲ್ಲೆ

ಮೈಸೂರಿನಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ ; ಸಂಸದ ಪ್ರತಾಪ್ ಸಿಂಹ ಕಿಡಿ !

ಮೈಸೂರು: ನಗರದಲ್ಲಿ ಅಳವಡಿಸಲಾಗಿರುವ 108 ಹೊಸ ಟ್ರಾಫಿಕ್ ಸಿಗ್ನಲ್‌ಗಳು ಅವೈಜ್ಞಾನಿಕವಾಗಿವೆ ಎಂದು ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ಒಂದೂವರೆಯಿಂದ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ 9-10 ಸಿಗ್ನಲ್‌ಗಳನ್ನು ಅಳವಡಿಸಿರುವುದು ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ವಾಹನ ದಟ್ಟಣೆ ಇಲ್ಲದ ರಸ್ತೆಗಳಲ್ಲೂ ಸಿಗ್ನಲ್ ಹಾಕಿರುವುದು ಸರಿಯಲ್ಲ ಎಂದು , ಬೆಳಗಿನ ಅವಧಿಯನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಈ ಸಿಗ್ನಲ್‌ಗಳ ಅಗತ್ಯವಿಲ್ಲ . ಕಮಿಷನ್ ಆಸೆಗಾಗಿ ಇಂತಹ ಅನಗತ್ಯ ಕಾಮಗಾರಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ರಿಂಗ್ ರೋಡ್‌ನಂತಹ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸಿಗ್ನಲ್‌ಗಳಿಗಿಂತ ಅಂಡರ್‌ಪಾಸ್ ಮತ್ತು ಓವರ್‌ಬ್ರಿಡ್ಜ್‌ಗಳೇ ಶಾಶ್ವತ ಪರಿಹಾರ . ಸಂಸದರಾಗಿ ತಾವು ಈಗಾಗಲೇ ಏಳು ಅಂಡರ್‌ಪಾಸ್ ಹಾಗೂ ಓವರ್‌ಬ್ರಿಡ್ಜ್‌ಗಳಿಗೆ ಅನುಮೋದನೆ ನೀಡಿರುವುದನ್ನು ನೆನಪಿಸಿ. ಸಿಗ್ನಲ್‌ಗಳ ಅಳವಡಿಕೆಯಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತದೆಯೇ ಹೊರತು ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.

ನಗರದಾದ್ಯಂತ ತಲೆ ಎತ್ತುತ್ತಿರುವ ಫ್ಲೆಕ್ಸ್ ಬೋರ್ಡ್‌ಗಳ ಬಗ್ಗೆಯೂ ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪಕ್ಷಗಳು ತಮ್ಮ ಪ್ರಚಾರಕ್ಕಾಗಿ ನಗರದ ಸೌಂದರ್ಯವನ್ನು ಹಾಳುಗೆಡವುತ್ತಿವೆ , ಮೈಸೂರನ್ನು ‘ಫ್ಲೆಕ್ಸ್ ಮುಕ್ತ’ ನಗರವನ್ನಾಗಿ ಮಾಡಲು ಜಿಲ್ಲಾಧಿಕಾರಿಗಳು ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button