Freedom TV

ಕೆ.ಎಸ್​​ ಈಶ್ವರಪ್ಪ ಮನೆಗೆ ತೆರಳಿ ಆಶೀರ್ವಾದ ಪಡೆದ ಬಿ.ವೈ. ವಿಜಯೇಂದ್ರ


ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ನಿವಾಸಕ್ಕೆ ಬುಧವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿದರು. ಈ ವೇಳೆ ಈಶ್ವರಪ್ಪ ಅವರ ಆಶೀರ್ವಾದ ಪಡೆದರು.

ವಿಜಯೇಂದ್ರ ಅವರನ್ನು ಈಶ್ವರಪ್ಪ ಪುತ್ರ ಕೆ.ಈ ಕಾಂತೇಶ ಸ್ವಾಗತಿಸಿದರು. ಈಶ್ವರಪ್ಪ ಅವರಿಗೆ ಶಾಲು ಹಾಕಿ ವಿಜಯೇಂದ್ರ ಸನ್ಮಾನ ಮಾಡಿದರು. ವಿಜಯೇಂದ್ರ ಅವರನ್ನು ಅಭಿನಂದಿಸಿ ಈಶ್ವರಪ್ಪ ಸಿಹಿ ತಿನ್ನಿಸಿದರು. ಈ ವೇಳೆ ಕಾರ್ಯಕರ್ತರು ಜಯ ಘೋಷ ಕೂಗಿದರು. ನಂತರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು.

Comments (0)

Your email address will not be published. Required fields are marked *

Back to top button