ಕ್ರಿಕೆಟ್ಜಿಲ್ಲೆ

ಅಂತರಾಷ್ಟ್ರೀಯ ಸಾಧಕರಿಗೆ ಕಾರವಾರದ ಸ್ಪಂದನ ಟ್ರಸ್ಟ್​​ನಿಂದ ಗೌರವ

ಕಾರವಾರ :- ಅಂತರಾಷ್ಟ್ರೀಯ ಪ್ಯಾರಾ ಬ್ಯಾಂಡ್ಮಿಂಟನ್ ಪಂದ್ಯದಲ್ಲಿ ಕಂಚಿನ ಪದಕ ವಿಜೇತ ಮಂಜುನಾಥ ನಾಯ್ಕ ಅವರನ್ನು ಅಭಿನಂದಿಸಲಾಯಿತು. ಸ್ಪಂದನ ಚಾರಿಟೇಬಲ್ ಟ್ರಸ್ಟ್, ಕ್ರಿಯಾಶೀಲ ಗೆಳೆಯರ ಬಳಗ, ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಾಮಧಾರಿ ಗುರುಮಠದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.


ಈ ವೇಳೇ ಮಾತಾಡಿದ ಸ್ಪಂದನ ಚಾರಿಟೆಲ್ ಟ್ರಸ್ಟನ ಅಧ್ಯಕ್ಷ ರಾಘವೇಂದ್ರ ನಾಯ್ಕ, ವಿಕಲತೆ ಎನ್ನುವುದು ದೇಹಕ್ಕೆ ಹೊರೆತು ಮನಸ್ಸಿಗಲ್ಲ. ಮಂಜುನಾಥ ನಾಯ್ಕ ಅವರ ಒಂದು ಕಾಲು ಪೋಲಿಯೋದಿಂದ ದುರ್ಬಲವಾಗಿದ್ದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು. ಕಸಾಪ‌ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ , ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದಿನೇಶ ನಾಯ್ಕ, ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಸಾಹಿತಿ ಶ್ರೀಧರ ಶೇಟ್ ಮಾತನಾಡಿದರು. ಗುರುಮಠದ ಗೌರವಾಧ್ಯಕ್ಷ ಕೃಷ್ಣ ನಾಯ್ಕ, ಸದಸ್ಯರಾದ ಎಂ.ಕೆ.ನಾಯ್ಕ, ಮುಕುಂದ ನಾಯ್ಕ, ಪ್ರಕಾಶ ನಾಯ್ಕ, ಮಾಸ್ತಿ ನಾಯ್ಕ, ನಾರಾಯಣ ಗುರು ಸಮಿತಿ ಸಂಚಾಲಕ ಮನಮೋಹನ ನಾಯ್ಕ, ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಹಾಗೂ ಪಾಂಡುರಂಗ ನಾಯ್ಕ ಉಪಸ್ಥಿತರಿದ್ದರು.

Comments (0)

Your email address will not be published. Required fields are marked *

Back to top button